ದೇಶ

ಡಬಲ್ ಮಾಸ್ಕ್, ಫೇಸ್ ಶೀಲ್ಡ್ ಬಳಸಲು ಮುಂಬೈ ಪೊಲೀಸ್ ಆಯುಕ್ತರ ಸೂಚನೆ

Nagaraja AB

ಮುಂಬೈ: ಕಾರ್ಯಕ್ಷೇತ್ರದಲ್ಲಿರುವ ಪೊಲೀಸ್ ಸಿಬ್ಬಂದಿ ಡಬಲ್ ಮಾಸ್ಕ್ ಮತ್ತು ಫೇಸ್ ಶೀಲ್ಡ್  ಬಳಸುವಂತೆ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರೇಲ್ ಸೂಚಿಸಿರುವುದಾಗಿ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ಕೋವಿಡ್-19 ನಡುವೆ ಜನರ ಅನಗತ್ಯ ಓಡಾಟವನ್ನು ತಡೆಯಲು ನಗರದಾದ್ಯಂತ ಪೊಲೀಸ್ ಚೆಕ್ ಪಾಯಿಂಟ್ ಗಳನ್ನು ತೆರೆದ ಬೆನ್ನಲ್ಲೆ ನಗರ ಪೊಲೀಸ್ ಆಯುಕ್ತರು ಈ ರೀತಿಯ ಸೂಚನೆ ನೀಡಿದ್ದಾರೆ ಎಂದು ಡಿಸಿಪಿ ಎಸ್. ಚೈತನ್ಯ ತಿಳಿಸಿದ್ದಾರೆ.

ನಗರದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ಒಳಗೊಂಡಂತೆ ಅನೇಕ ಕಡೆಗಳಲ್ಲಿ ಜನ ಹಾಗೂ ವಾಹನ ಸಂಚಾರವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.ಕೋವಿಡ್-19 ಸೋಂಕು ಹರಡದಂತೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಆದಾಗ್ಯೂ, ಕೋವಿಡ್-19 ಸೋಂಕಿನಿಂದ ರಕ್ಷಿಸಿಕೊಳ್ಳಲು ಡಬಲ್ ಮಾಸ್ಕ್, ಫೇಸ್ ಶೀಲ್ಡ್ ಬಳಸಲು ನಗರ ಪೊಲೀಸ್ 
ಆಯುಕ್ತರು ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.

ಕೋವಿಡ್-19 ಎರಡನೇ ಅಲೆಯಲ್ಲಿ ಈವರೆಗೂ ಮುಂಬೈನ ವಿವಿಧ ಪೊಲೀಸ್ ಠಾಣೆಗಳಲ್ಲಿನ ಆರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT