ದೇಶ

ಕೋವಿಡ್-19 ಸೋಂಕು ಇದ್ದರೂ ನಕಲಿ ನೆಗೆಟೀವ್ ವರದಿ ಪಡೆದು ಮಣಿಪುರಕ್ಕೆ ಹಾರಿದ ಮಹಿಳೆ: 2,000 ರೂ ದಂಡ!

Srinivas Rao BV

ಗುವಾಹಟಿ: ಕೋವಿಡ್-19 ಸೋಂಕು ದೃಢಪಟ್ಟಿದ್ದರೂ ನಕಲಿ ನೆಗೆಟೀವ್ ವರದಿ ಮೂಲಕ ಹೈದರಾಬಾದ್ ನಿಂದ ಕೋಲ್ಕತ್ತಾ ಮೂಲಕ ಮಣಿಪುರಕ್ಕೆ ತಲುಪಿದ ಮಹಿಳೆಗೆ 2,000 ರೂಪಾಯಿ ದಂಡ ವಿಧಿಸಲಾಗಿದೆ. 

ಪಾಪಲ್ ಮಾಯಿ ಲೈಕೈ ನ 21 ವರ್ಷದ ವಾಂಗ್ಖೇಮ್ ರಬಿನಾ ದೇವಿ ಕೋವಿಡ್-19 ಪರೀಕ್ಷೆಯ ನಕಲಿ ನೆಗೆಟೀವ್ ವರದಿಯನ್ನು ಸಲ್ಲಿಸಿ ಏ.22 ರಂದು ಇಂಡಿಗೋ ವಿಮಾನದ ಮೂಲಕ ಪ್ರಯಾಣ ಮಾಡಿದ ಮಹಿಳೆಯಾಗಿದ್ದಾರೆ. 

ಇಂಫಾಲ ವಿಮಾನ ನಿಲ್ದಾಣದಲ್ಲಿ ದಾಖಲಾತಿಗಳ ಪರಿಶೀಲನೆ ವೇಳೆ ಮಹಿಳೆ ಸಿಕ್ಕಿಬಿದ್ದಿದ್ದು ಪರಿಶೀಲನೆ ವೇಳೆ ಏ.21 ರಂದು ಮಹಿಳೆಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು ಎಂಬುದು ಬಹಿರಂಗಗೊಂಡಿದೆ. 

ಥೌಬಲ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್ ವಂದನಾ ದೇವಿ ಮಹಿಳೆಗೆ ರಾಜ್ಯದ ಸಾಂಕ್ರಾಮಿಕ ತಡೆ ಕಾಯ್ದೆಯ ಅಡಿಯಲ್ಲಿ ದಂಡ ವಿಧಿಸಿದ್ದು, ಈಕೆಯ ವರ್ತನೆ ಸಾಂಕ್ರಾಮಿಕ ರೋಗ ಸಹಪ್ರಯಾಣಿಕರಿಗೆ ಹರಡುವ ಅಪಾಯವನ್ನುಂಟುಮಾಡಿದೆ ಎಂದು ಹೇಳಿದ್ದಾರೆ. 

ಚೇತರಿಕೆಯಾದ ಬಳಿಕ ಮಹಿಳೆ ಕಾರ್ಯಕಾರಿ ಮ್ಯಾಜಿಸ್ಟ್ರೇಟ್ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
 

SCROLL FOR NEXT