ದೇಶ

ಕೋವಿಡ್-19 ಸೋಂಕು ಪ್ರಮಾಣ ಶೇ.15 ಕ್ಕಿಂತ ಹೆಚ್ಚಿರುವ 150 ಜಿಲ್ಲೆಗಳಲ್ಲಿ ಲಾಕ್ ಡೌನ್: ವರದಿ

Srinivas Rao BV

ನವದೆಹಲಿ: ಕೋವಿಡ್-19 ಸೋಂಕು ಪ್ರಮಾಣ ಶೇ.15 ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಅಗತ್ಯವಿದೆ ಎಂಬ ಸಲಹೆ ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತ ಸಭೆಯಲ್ಲಿ ಬಂದಿದೆ. 

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ 150 ಜಿಲ್ಲೆಗಳಲ್ಲಿ ಶೇ.15 ಕ್ಕಿಂತ ಹೆಚ್ಚಿನ ಪ್ರಮಾಣದ ಕೋವಿಡ್-19 ಪ್ರಕರಣಗಳಿವೆ. 

ಈ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೂಂಡು, ಆರೋಗ್ಯ ಸೇವೆಗಳು ಒತ್ತಡದಲ್ಲಿರುವ ಹಿನ್ನೆಲೆಯಲ್ಲಿ ಈ ಉನ್ನತ ಮಟ್ಟದ ಸಭೆಯಲ್ಲಿ ಈ ಶಿಫಾರಸು ಮಾಡಲಾಗಿದೆ. ಈ ಕುರಿತ ಅಂತಿಮ ನಿರ್ಧಾರವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ತೆಗೆದುಕೊಳ್ಳಲಾಗುತ್ತದೆ. 

"ಸೋಂಕು ಪ್ರಸರಣ ಹೆಚ್ಚಿರುವ ಜಿಲ್ಲೆಗಳಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಮುಂದಿನ ಕೆಲವು ವಾರಗಳ ಕಾಲ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದನ್ನು ಟಿಒಐ ಉಲ್ಲೇಖಿಸಿದೆ. 

ಏ.28 ರಂದು ಭಾರತದಲ್ಲಿ 3,60,960 ಹೊಸ ಕೋವಿಡ್-19 ಸೋಂಕು ವರದಿಯಾಗಿದ್ದು, 24 ಗಂಟೆಗಳಲ್ಲಿ 2,61,162 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 

SCROLL FOR NEXT