ದೇಶ

ಸುಂಕ ಸಹಕಾರ ಕುರಿತು ಬ್ರಿಟನ್‌ನೊಂದಿಗಿನ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ

Vishwanath S

ನವದೆಹಲಿ: ಸುಂಕ ಸಹಕಾರ ಮತ್ತು ಸುಂಕ ವಿಷಯಗಳಲ್ಲಿ ಪರಸ್ಪರ ಆಡಳಿತಾತ್ಮಕ ನೆರವು ಕುರಿತ ಒಪ್ಪಂದಗಳಿಗೆ ಭಾರತ ಮತ್ತು ಬ್ರಿಟನ್‌ ನಡುವಿನ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಸುಂಕ ಅಪರಾಧಗಳ ತಡೆಗಟ್ಟುವಿಕೆ ಮತ್ತು ತನಿಖೆಗೆ ಸಂಬಂಧಿಸಿದ ಮಾಹಿತಿಯ ಲಭ್ಯತೆಗೆ ಈ ಒಪ್ಪಂದವು ಸಹಾಯ ಮಾಡುತ್ತದೆ. 

ಈ ಒಪ್ಪಂದವು ವ್ಯಾಪಾರಕ್ಕೆ ಅನುಕೂಲವಾಗಲಿದೆ ಮತ್ತು ದೇಶಗಳ ನಡುವೆ ವಹಿವಾಟು ನಡೆಸುವ ಸರಕುಗಳ ಸಮರ್ಥ ಅನುಮತಿಯನ್ನು ಖಚಿತಪಡಿಸುತ್ತದೆ. ಎರಡೂ ಪಕ್ಷಗಳ ಅಧಿಕೃತ ಪ್ರತಿನಿಧಿಗಳು ಸಹಿ ಮಾಡಿದ ನಂತರ ಈ ಒಪ್ಪಂದಗಳು ಜಾರಿಗೆ ಬರಲಿದೆ.

ಪ್ರಸ್ತಾವಿತ ಒಪ್ಪಂದದ ಕರಡು ಪಠ್ಯವನ್ನು ಎರಡು ಕಸ್ಟಮ್ಸ್ ಆಡಳಿತಗಳ ಒಪ್ಪಿಗೆಯೊಂದಿಗೆ ಅಂತಿಮಗೊಳಿಸಲಾಗಿದೆ.

ಈ ಒಪ್ಪಂದವು ಭಾರತೀಯ ಸುಂಕ ಕಾಳಜಿ,ವಿಶೇಷವಾಗಿ ಕಸ್ಟಮ್ಸ್ ಮೌಲ್ಯದ ನಿಖರತೆ, ಸುಂಕದ ವರ್ಗೀಕರಣ ಮತ್ತು ಉಭಯ ದೇಶಗಳ ನಡುವೆ ವಹಿವಾಟು ನಡೆಸುವ ಸರಕುಗಳ ಮೂಲದ ಬಗ್ಗೆ ಮಾಹಿತಿ ವಿನಿಮಯ ಮಾಡುವ ಕ್ಷೇತ್ರದ ಅವಶ್ಯಕತೆಗಳನ್ನು ಒಳಗೊಂಡಿದೆ.

SCROLL FOR NEXT