ದೇಶ

ಆಕ್ಸಿಜನ್ ಉತ್ಪಾದನೆ ಮಾಡಲು ಆಸ್ಪತ್ರೆಗಳಿಗೆ ಡಿಆರ್ ಡಿಒ ನೆರವು

Srinivas Rao BV

ಬೆಂಗಳೂರು: ಕೋವಿಡ್-19 ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿರುವುದರ ಜೊತೆಗೆ, ಆಕ್ಸಿಜನ್ ಲಭ್ಯತೆಯ ಕೊರತೆ ಮತ್ತಷ್ಟು ಆತಂಕ ಮೂಡಿಸಿದೆ. ಸಾಕಷ್ಟು ಆಕ್ಸಿಜನ್ ಉತ್ಪಾದಿಸುವುದಕ್ಕಾಗಿ ಈಗ ಡಿಆರ್ ಡಿಒ ಆಸ್ಪತ್ರೆಗಳಿಗೆ ಸಹಾಯ ಮಾಡುವುದಕ್ಕೆ ಮುಂದಾಗಿದ್ದು ಆಸ್ಪತ್ರೆಗಳು ಇನ್ನು ಮುಂದೆ ವೈದ್ಯಕೀಯ ಆಕ್ಸಿಜನ್ ಸಾಗಣೆಗಾಗಿ ಕಾಯುವುದು ತಪ್ಪಲಿದೆ. 

ಡಿಆರ್ ಡಿಒ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಆಸ್ಪತ್ರೆಗಳಿಗೆ ಇರುವಲ್ಲಿಯೇ ಆಕ್ಸಿಜನ್ ನ್ನು ತಯಾರಿಸುವುದಕ್ಕೆ ಸಹಕಾರಿಯಾಗಲಿದೆ.  ಜೈವಿಕ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರೋಮೆಡಿಕಲ್ ಪ್ರಯೋಗಾಲಯ ಲಘು ಯುದ್ಧ ವಿಮಾನ ತೇಜಸ್ ನಲ್ಲಿ ಪೈಲಟ್ ಗಳಿಗೆ ಆಕ್ಸಿಜನ್ ಉತ್ಪಾದನೆಗಾಗಿ ಬಳಕೆ ಮಾಡಿಕೊಳ್ಳುವ ತಂತ್ರಜ್ಞಾನ (ವೈದ್ಯಕೀಯ ಆಕ್ಸಿಜನ್ ಘಟಕ ಅಥವಾ ಎಂಒಪಿ ತಂತ್ರಜ್ಞಾನ) ಇದಾಗಿದೆ. 

ಈ ಆಕ್ಸಿಜನ್ ಘಟಕ ಪ್ರತಿ ನಿಮಿಷಕ್ಕೆ 1,000 ಲೀಟರ್ ಗಳಷ್ಟು ಆಕ್ಸಿಜನ್ ಉತ್ಪಾದನೆ ಸಾಮರ್ಥ್ಯವನ್ನು ಹೊಂದಿದ್ದು. ಒಂದೇ ಬಾರಿಗೆ 190 ರೋಗಿಗಳಿಗೆ ತಲಾ 5 ಎಲ್ ಪಿಎಂ ನಷ್ಟು ಆಕ್ಸಿಜನ್ ಒದಗಿಸಬಹುದಾಗಿದೆ ಅಷ್ಟೇ ಅಲ್ಲದೇ ದಿನವೊಂದಕ್ಕೆ 195 ಸಿಲಿಂಡರ್ ಗಳನ್ನು ರೀಫಿಲ್ ಮಾಡಬಹುದಾಗಿದೆ. 

ಬೆಂಗಳೂರು ಮೂಲದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಹಾಗೂ ಕೊಯಂಬತ್ತೂರು ಮೂಲದ ಟ್ರೈಡೆಂಟ್ ನ್ಯೂಮ್ಯಾಟಿಕ್ಸ್ ಪ್ರೈ.ಲಿಮಿಟೆಡ್ ಗೆ ತಂತ್ರಜ್ಞಾನವನ್ನು ವರ್ಗಾವಣೆ ಮಾಡಲಾಗಿದೆ.

ಈ ಸಂಸ್ಥೆಗಳು 1,000 ಎಲ್ ಪಿಎಂ ಸಾಮರ್ಥ್ಯದ 380 ಘಟಕಗಳನ್ನು ತಯಾರಿಸಲಿದ್ದು, ಭಾರತದಾದ್ಯಂತ ಆಸ್ಪತ್ರೆಗಳಲ್ಲಿ ಅಳವಡಿಕೆ ಮಾಡಲಾಗುತ್ತದೆ. ಇದಷ್ಟೇ ಅಲ್ಲದೇ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಮ್ ನಿಂದ 500 ಎಲ್ ಪಿಎಂ ನಷ್ಟು ಸಾಮರ್ಥ್ಯದ 120 ಆಕ್ಸಿಜನ್ ಘಟಕಗಳನ್ನು ತಯಾರಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. 

SCROLL FOR NEXT