ದೇಶ

ರಾಜಧಾನಿ ದೆಹಲಿಯಲ್ಲಿ ಸತತ ಮಳೆ, ತಗ್ಗು ಪ್ರದೇಶಗಳು ಜಲಾವೃತ, ಸಂಚಾರಕ್ಕೆ ಅಡ್ಡಿ 

Sumana Upadhyaya

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜನತೆ ಭಾನುವಾರ ಮುಂಜಾನೆ ಎದ್ದ ಕೂಡಲೇ ಧಾರಾಕಾರ ಮಳೆಯನ್ನು ಕಂಡಿದ್ದಾರೆ. ಹಲವು ಪ್ರದೇಶಗಳು ಜಲಾವೃತವಾಗಿದ್ದು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿವೆ.

ಯಮುನಾ ಬಜಾರ್ ನಿಂದ ಸಂಚರಿಸುತ್ತಿರುವ ವಾಹನಗಳು ಅಲ್ಲಲ್ಲಿ ಭಾರೀ ಮಳೆಯಿಂದ ಭಾರೀ ತೊಂದರೆ ಅನುಭವಿಸುತ್ತಿವೆ. ಭಾರತದ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಗುಡುಗು ಸಹಿತ ಹಗುರದಿಂದ ಕೂಡಿದ ಭಾರೀ ಮಳೆ ದೆಹಲಿ, ಎನ್ ಸಿಆರ್ ಸುತ್ತಮುತ್ತ ಸುರಿಯಲಿದೆ.

ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 48 ರಂತೆ ವರದಿಯಾಗಿದೆ. ಸರ್ಕಾರಿ ಏಜೆನ್ಸಿಗಳ ಪ್ರಕಾರ, 0-50 ಶ್ರೇಣಿಯ ಎಕ್ಯೂಐನ್ನು 'ಒಳ್ಳೆಯದು' ಎಂದು ಪರಿಗಣಿಸಲಾಗುತ್ತದೆ, 51-100 'ತೃಪ್ತಿದಾಯಕ', 101- 200 'ಮಧ್ಯಮ', 201-300 'ಕಳಪೆ', 301-400 'ಅತ್ಯಂತ ಕಳಪೆ' ಮತ್ತು 401-500 ಅನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

ಮುನ್ಸೂಚನೆಯಂತೆ ಒಟ್ಟಾರೆ ಗಾಳಿಯ ಗುಣಮಟ್ಟವು ತೃಪ್ತಿದಾಯಕ ಮಟ್ಟದಲ್ಲಿದೆ. ದೆಹಲಿಯಲ್ಲಿ ಚದುರಿದ ಮಳೆಯ ಚಟುವಟಿಕೆ ಮುಂದಿನ ಎರಡು ದಿನಗಳಲ್ಲಿ ಮತ್ತು ನಂತರ ತೀವ್ರಗೊಳ್ಳುವ ಸಾಧ್ಯತೆಯಿದೆ. ಮುಂದಿನ ಮೂರು ದಿನಗಳವರೆಗೆ ಉತ್ತಮ ಎಕ್ಯುಐಗೆ ತೃಪ್ತಿಕರವಾಗಿರುತ್ತದೆ ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (SAFAR) ತಿಳಿಸಿದೆ.

ಅಲ್ಲದೆ ದೆಹಲಿಯಲ್ಲಿ ತಾಪಮಾನ ಮತ್ತಷ್ಟು ಕುಸಿದಿದ್ದು ತಾಪಮಾನ ಇಂದು 26 ಡಿಗ್ರಿ ಸೆಲ್ಸಿಯಸ್ ಆಗಿದೆ. ಮೋಡ ಕವಿದ ವಾತಾವರಣ, ಅಧಿಕ ಮಳೆಯಿಂದ ತಾಪಮಾನ ಇಳಿಕೆಯಾಗಿದೆ.

SCROLL FOR NEXT