ದೇಶ

ಅಸ್ಸಾಂ ಸಿಎಂ ವಿರುದ್ಧ ಎಫ್ಐಆರ್ ಹಿಂಪಡೆಯಲು ಸಿದ್ಧ: ಮಿಜೋರಾಂ ಸರ್ಕಾರ

Vishwanath S

ಐಜ್ವಾಲ್: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ಹಿಂಪಡೆಯಲು ಮಿಜೋರಾಂ ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಲಾಲ್ನುಮಾವಿಯಾ ಚುವಾಂಗೋ ಹೇಳಿದ್ದಾರೆ.

ಮಿಜೋರಾಂ ಮುಖ್ಯಮಂತ್ರಿ ಜೊರಾಮ್‌ಥಂಗಾ ಸಹ ಎಫ್‌ಐಆರ್‌ನಲ್ಲಿ ಹಿಮಂತ್ ಬಿಸ್ವಾ ಶರ್ಮಾ ಅವರ ಹೆಸರನ್ನು ಸೇರಿಸುವುದನ್ನು ಒಪ್ಪಲಿಲ್ಲ ಎಂದು ಚುವಾಂಗೋ ಹೇಳಿದರು.

"ವಾಸ್ತವವಾಗಿ, ಎಫ್ಐಆರ್ನಲ್ಲಿ ಅಸ್ಸಾಂ ಮುಖ್ಯಮಂತ್ರಿಯ ಹೆಸರನ್ನು ಉಲ್ಲೇಖಿಸಲು ನಮ್ಮ ಮುಖ್ಯಮಂತ್ರಿ ನಿಜವಾಗಿಯೂ ಒಪ್ಪಿರಲಿಲ್ಲ. ಅಲ್ಲದೆ ಅದನ್ನು ಪರಿಶೀಲಿಸುವಂತೆ ನನಗೆ ಸೂಚಿಸಿದರು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಚುವಾಂಗೋ ಅವರು ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅಸ್ಸಾಂ ಮುಖ್ಯಮಂತ್ರಿಯ ವಿರುದ್ಧ ಆರೋಪಗಳನ್ನು ದೃಢಿಕರಿಸಲು ಯಾವುದೇ ಕಾನೂನು ಮಾನ್ಯತೆ ಇಲ್ಲದಿದ್ದರೆ ಅವರ ಹೆಸರನ್ನು ತೆಗೆದುಹಾಕುವುದಾಗಿ ಹೇಳಿದರು.

ಇದೇ ವೇಳೆ, ಆರು ಅಸ್ಸಾಂ ಅಧಿಕಾರಿಗಳು ಮತ್ತು 200 ಅಪರಿಚಿತ ಪೊಲೀಸ್ ಸಿಬ್ಬಂದಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆಯೇ ಎಂಬ ಬಗ್ಗೆ ಮುಖ್ಯ ಕಾರ್ಯದರ್ಶಿ ಏನನ್ನು ಹೇಳಿಲ್ಲ.

ಮಿಜೋರಾಮ್ ಪೊಲೀಸರು ಸಿಎಂ ಹಿಮಂತ ಬಿಸ್ವಾ ಶರ್ಮಾ, ನಾಲ್ಕು ಹಿರಿಯ ಅಸ್ಸಾಂ ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ಅಧಿಕಾರಿಗಳ ವಿರುದ್ಧ 'ಕೊಲೆ ಯತ್ನ', 'ಕ್ರಿಮಿನಲ್ ಪಿತೂರಿ' ಮತ್ತು 'ಹಲ್ಲೆ' ಸೇರಿದಂತೆ ವಿವಿಧ ಆರೋಪಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. 

SCROLL FOR NEXT