ದೇಶ

ಮಿಜೋರಾಂ-ಅಸ್ಸಾಂ ಗಡಿ ಉದ್ವಿಗ್ನತೆ ಸೌಹಾರ್ದಯುತವಾಗಿ ಪರಿಹರಿಸಿ: ಉಭಯ ಸಿಎಂಗಳಿಗೆ ಅಮಿತ್ ಶಾ ಸೂಚನೆ

Vishwanath S

ಐಜ್ವಾಲ್: ಎರಡು ಈಶಾನ್ಯ ರಾಜ್ಯಗಳ ನಡುವಿನ ಗಡಿ ಉದ್ವಿಗ್ನತೆಯನ್ನು ಸೌಹಾರ್ದಯುತವಾಗಿ ನಿವಾರಿಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಮಿಜೋರಾಂ ಸಿಎಂ ಜೊರಮಥಂಗ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. 

ಗಡಿ ಸಮಸ್ಯೆಯನ್ನು ಅರ್ಥಪೂರ್ಣ ಸಂವಾದದ ಮೂಲಕ ಸೌಹಾರ್ದಯುತವಾಗಿ ಪರಿಹರಿಸಲು ನಿರ್ಧರಿಸಲಾಗಿದೆ ಎಂದು ಮಿಜೋರಾಂ ಸಿಎಂ ಜೊರಮಥಾಂಗ ಹೇಳಿದ್ದಾರೆ.

'ಕೇಂದ್ರ ಗೃಹ ಸಚಿವ ಮತ್ತು ಅಸ್ಸಾಂ ಸಿಎಂರೊಂದಿಗೆ ಚರ್ಚಿಸಿದಂತೆ, ಮಿಜೋರಾಂ-ಅಸ್ಸಾಂ ಗಡಿ ಸಮಸ್ಯೆಯನ್ನು ಅರ್ಥಪೂರ್ಣ ಸಂವಾದದ ಮೂಲಕ ಸೌಹಾರ್ದಯುತವಾಗಿ ಪರಿಹರಿಸಲು ನಾವು ಒಪ್ಪಿಕೊಂಡಿದ್ದೇವೆ ಎಂದು ಜೊರಮಥಾಂಗ ಟ್ವೀಟ್ ಮಾಡಿದ್ದಾರೆ.

ಜೊರಮಥಾಂಗ ಅವರು ಮಿಜೋರಾಂನ ಜನರನ್ನು ಪ್ರಚೋದಿತ ಸಂದೇಶಗಳನ್ನು ಪೋಸ್ಟ್ ಮಾಡುವುದನ್ನು ಮತ್ತು ಸಾಮಾಜಿಕ ಮಾಧ್ಯಮದ ದುರುಪಯೋಗವನ್ನು ಮಾಡಿಕೊಳ್ಳದಂತೆ ಒತ್ತಾಯಿಸಿದರು.

ಜುಲೈ 26 ರಂದು ಮಿಜೋರಾಂನ ಕೊಲಾಸಿಬ್ ಜಿಲ್ಲೆಯ ವೈರೆಂಗ್ಟೆ ಪಟ್ಟಣದ ಬಳಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಆರು ಪೊಲೀಸ್ ಸಿಬ್ಬಂದಿ ಸೇರಿದಂತೆ ಅಸ್ಸಾಂನ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ.

ಕೇಂದ್ರವು ಸಶಸ್ತ್ರ ಪೊಲೀಸ್ ಪಡೆ(ಸಿಆರ್‌ಪಿಎಫ್)ಯ ಐದು ತುಕಡಿಗಳನ್ನು ನಿಯೋಜಿಸಲಾಗಿದೆ.

SCROLL FOR NEXT