ದೇಶ

ಐಟಿ ಕಾಯ್ದೆಯ ಸೆಕ್ಷನ್ 66A ರದ್ದುಗೊಳಿಸುವ 2015 ರ ತೀರ್ಪು ಜಾರಿಗೆ ರಾಜ್ಯಗಳೇ ಹೊಣೆ: ಸುಪ್ರೀಂಗೆ ಕೇಂದ್ರ

Srinivas Rao BV

ನವದೆಹಲಿ: ಸಂವಿಧಾನದ ಅಡಿಯಲ್ಲಿ ಪೊಲೀಸ್ ಹಾಗೂ ಸಾರ್ವಜನಿಕ ಸುವ್ಯವಸ್ಥೆ ರಾಜ್ಯಗಳ ವಿಷಯವಾಗಿದ್ದು, ಐಟಿ ಕಾಯ್ದೆಯ ಸೆಕ್ಷನ್ 66A ರ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ನ ಆದೇಶ ಜಾರಿಗೊಳಿಸುವುದು ಪ್ರಾಥಮಿಕವಾಗಿ ರಾಜ್ಯಗಳ ಹೊಣೆಯೇ ಆಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ.

ಸುಪ್ರೀಂ ಕೋರ್ಟ್ ನ ಆದೇಶ ಜಾರಿಗೊಳಿಸಿರುವುದಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಅಗತ್ಯಕ್ಕಿಂತ ಕಡಿಮೆ ಎಂದು ಆರೋಪಿಸಿ ಎನ್ ಜಿಒ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಈ ಸಂಬಂಧ ಪ್ರಮಾಣಪತ್ರ ಸಲ್ಲಿಸಿ ಈ ಮಾಹಿತಿ ನೀಡಿದೆ.

ರದ್ದುಗೊಳಿಸಿದ ಸೆಕ್ಷನ್ ಪೈಕಿ ಯಾವುದೇ ವ್ಯಕ್ತಿ ಅವಹೇಳನಕಾರಿ ಮೆಸೇಜ್ ಗಳನ್ನು ಕಳಿಸಿದರೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಬಹುದಿತ್ತು.

ನ್ಯಾ.ಆರ್ ಎಫ್ ನಾರಿಮನ್ ಅವರಿದ್ದ ಪೀಠದೆದುರು ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದ್ದು, ಸೈಬರ್ ಕ್ರೈಮ್ ಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳುವುದು ರಾಜ್ಯ ಸರ್ಕಾರಗಳ ಹೊಣೆ ಎಂದು ತಿಳಿಸಿದೆ.

2015 ರ ಮಾರ್ಚ್ 24 ರಂದು ಸೆಕ್ಷನ್ 66ಎ ನ್ನು ರದ್ದುಗೊಳಿಸಿತ್ತು. ಈ ಸೆಕ್ಷನ್ ಅಡಿಯಲ್ಲಿ ಅನವಶ್ಯಕವಾಗಿ ಏಕಾಏಕಿ ವ್ಯಕ್ತಿಗಳನ್ನು ಬಂಧಿಸುವುದನ್ನು ತಪ್ಪಿಸುವುದಕ್ಕಾಗಿ ಕೋರ್ಟ್ ಈ ಆದೇಸ ನೀಡಿತ್ತು. ಆದೇಶದ ಬಗ್ಗೆ ಪೊಲೀಸ್ ಸಿಬ್ಬಂದಿಗಳಿಗೆ ಅರಿವು ಮೂಡಿಸುವುದಕ್ಕೆ ಫೆ.15, 2019 ರಂದು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಿತ್ತು.

SCROLL FOR NEXT