ದೇಶ

ಪಶ್ಚಿಮ ಬಂಗಾಳ ಪ್ರವಾಹ: ಸಿಎಂ ಮಮತಾಗೆ ಪ್ರಧಾನಿ ಮೋದಿ ಕರೆ, ಎಲ್ಲಾ ರೀತಿಯ ನೆರವು ನೀಡುವ ಭರವಸೆ

Lingaraj Badiger

ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ದೂರವಾಣಿ ಕರೆ ಮಾಡಿ ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪ್ರವಾಹ ಪರಿಸ್ಥಿತಿಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಮಂತ್ರಿಗಳು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಭರವಸೆ ನೀಡಿದರು ಎಂದು ಅವರು ಹೇಳಿದ್ದಾರೆ.

ಹೌರಾ ಜಿಲ್ಲೆಯ ಪ್ರವಾಹ ಪೀಡಿತ ಉದಯನಾರಾಯಣಪುರಕ್ಕೆ ಭೇಟಿ ನೀಡಿದ್ದ ಮಮತಾ ಬ್ಯಾನರ್ಜಿ, ಪ್ರವಾಹ ಪರಿಸ್ಥಿತಿಯ ಬಗ್ಗೆ ವೈಮಾನಿಕ ಸಮೀಕ್ಷೆ ಪೂರ್ಣಗೊಳಿಸಿದ ನಂತರ ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಪಿಎಂಒಗೆ ವರದಿ ಕಳುಹಿಸುವುದಾಗಿ ಪ್ರಧಾನಿಗೆ ತಿಳಿಸಿದ್ದಾರೆ. 

ದಾಮೋದರ್ ವ್ಯಾಲಿ ಕಾರ್ಪೊರೇಷನ್ ಮತ್ತು ದುರ್ಗಾಪುರ ಬ್ಯಾರೇಜ್ ನಿಂದ ಹೆಚ್ಚು ನೀರು ಬಿಡುವ ಕಾರಣದಿಂದಾಗಿ ರಾಜ್ಯದ ಆರು ಜಿಲ್ಲೆಗಳ ದೊಡ್ಡ ಭಾಗಗಳು ಜಲಾವೃತಗೊಂಡಿರುವುದರಿಂದ ಕನಿಷ್ಠ 15 ಜನ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 3 ಲಕ್ಷ ಜನರು ಸ್ಥಳಾಂತರಗೊಳಿಸಲಾಗಿದೆ.

SCROLL FOR NEXT