ದೇಶ

ಅಂತರರಾಜ್ಯ ಗಡಿ ವಿವಾದಗಳನ್ನು ಪರಿಹರಿಸಲು ಅಸ್ಸಾಂ, ಮೇಘಾಲಯ ರಾಜ್ಯಗಳಿಂದ ಸಮಿತಿ ಸ್ಥಾಪನೆ

Vishwanath S

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯದ ಸಿಎಂ ಕಾನ್ರಾಡ್ ಕೆ ಸಂಗ್ಮಾ ಅವರು ತಮ್ಮ ಗಡಿ ವಿವಾದಗಳನ್ನು ಪರಿಹರಿಸಲು ಎರಡು ರಾಜ್ಯಗಳು ಸಮಿತಿಗಳನ್ನು ರಚಿಸುವುದಾಗಿ ಹೇಳಿದ್ದಾರೆ.

ಉಭಯ ರಾಜ್ಯಗಳು ತಮ್ಮ ಸಂಪುಟ ಸಚಿವರ ನೇತೃತ್ವದಲ್ಲಿ ಎರಡು ಸಮಿತಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಸಮಿತಿ ಮೂಲಕ ಆರಂಭದಲ್ಲಿ 12 ವಿವಾದಿತ ಪ್ರದೇಶಗಳನ್ನು ಆರು ಹಂತಗಳಲ್ಲಿ ಗಡಿ ವಿವಾದಗಳನ್ನು ಪರಿಹರಿಸುವ ಗುರಿಯನ್ನು ಹೊಂದಿವೆ ಎಂದು ಮುಖ್ಯಮಂತ್ರಿಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರತಿ ಸಮಿತಿಯು ಐದು ಸದಸ್ಯರನ್ನು ಹೊಂದಿರುತ್ತದೆ. ಇದರಲ್ಲಿ ಪ್ರತಿ ರಾಜ್ಯದ ಸಂಪುಟದ ಮಂತ್ರಿ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಪ್ರತಿನಿಧಿಗಳು ಸಮಿತಿಯ ಭಾಗವಾಗಿರಬಹುದು ಎಂದು ಶರ್ಮಾ ಹೇಳಿದರು.

ಎರಡೂ ಸಮತಿಯ ಸದಸ್ಯರು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ನಾಗರಿಕ ಸಮಾಜದ ಸದಸ್ಯರೊಂದಿಗೆ ಸಂವಹನ ನಡೆಸುತ್ತಾರೆ. ಅಲ್ಲದೆ 30 ದಿನಗಳಲ್ಲಿ ಚರ್ಚೆಗಳನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳಿದರು.

ಐತಿಹಾಸಿಕ ಪುರಾವೆಗಳು, ಜನಾಂಗೀಯತೆ, ಆಡಳಿತಾತ್ಮಕ ಅನುಕೂಲತೆ, ಸಂಬಂಧಿತ ಜನರ ಮನಸ್ಥಿತಿ ಮತ್ತು ಭಾವನೆಗಳು ಮತ್ತು ಭೂಮಿಯ ಅನ್ಯೋನ್ಯತೆ ಈ ಐದು ಅಂಶಗಳ ಆಧಾರದ ಮೇಲೆ ವಿವಾದಗಳನ್ನು ಪರಿಹರಿಸಿಕೊಳ್ಳಲು ಯತ್ನಿಸುತ್ತೇವೆ ಎಂದು ಸಂಗ್ಮಾ ಹೇಳಿದರು.

ಮೊದಲ ಹಂತದಲ್ಲಿ ತಾರಾಬಾರಿ, ಗಿಜಾಂಗ್, ಫಾಲಿಯಾ, ಬಕ್ಲಪರಾ, ಪಿಲಿಂಗ್‌ಕಟಾ ಮತ್ತು ಖಾನಾಪರ ಈ ಆರು ಪ್ರದೇಶಗಳ ಗಡಿ ಸಮಸ್ಯೆಯನ್ನು ತಾತ್ವಿಕವಾಗಿ ಪರಿಹರಿಸಿಕೊಳ್ಳಲಾಗುವುದು ಎಂದರು.

SCROLL FOR NEXT