ದೇಶ

ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ಕೋವಿಶೀಲ್ಡ್, ಕೋವಾಕ್ಸಿನ್ 78 ಕೋಟಿ ಡೋಸ್ ಲಭ್ಯವಿದೆ: ಕೇಂದ್ರ

Lingaraj Badiger

ನವದೆಹಲಿ: ಮುಂದಿನ ಮೂರು ತಿಂಗಳವರೆಗೆ ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನದ ಅಂಗವಾಗಿರುವ ಎರಡು ಕೋವಿಡ್ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನ ಸುಮಾರು 78 ಕೋಟಿ ಡೋಸ್‌ಗಳ ಉತ್ಪಾದನೆಯನ್ನು ಕೇಂದ್ರ ಯೋಜಿಸಿದೆ. ಇದು ನಿಧಾನಗತಿಯ ಕಾರ್ಯಕ್ರಮದಲ್ಲಿ ವೇಗದ ಭರವಸೆಯನ್ನು ಹುಟ್ಟುಹಾಕುತ್ತಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪರಿಶೀಲಿಸಿದ ಕೇಂದ್ರ ಆರೋಗ್ಯ ಸಚಿವಾಲಯವು ತಯಾರಿಸಿದ ಆಂತರಿಕ ಟಿಪ್ಪಣಿಯ ಪ್ರಕಾರ, ಆಗಸ್ಟ್‌ನಲ್ಲಿ, ಎರಡು ಲಸಿಕೆಗಳ ಸುಮಾರು 25.5 ಕೋಟಿ ಡೋಸ್‌ಗಳನ್ನು ತಯಾರಿಸಲಾಗುವುದು ಎಂದು ಹೇಳಿದೆ. ಇದು ಸೆಪ್ಟೆಂಬರ್ ನಲ್ಲಿ 26 ಕೋಟಿ ಡೋಸ್ ಮತ್ತು ಅಕ್ಟೋಬರ್ ನಲ್ಲಿ 28 ಕೋಟಿ ಡೋಸ್‌ಗಳಿಗಿಂತ ಹೆಚ್ಚಾಗುತ್ತದೆ.

ಒಟ್ಟು ಕೋವಿಡ್ ಲಸಿಕಾ ಅಂಕಿಅಂಶಗಳು ಈಗ 50 ಕೋಟಿ ಗಡಿ ದಾಟಿದೆ. ಆದರೆ ಲಸಿಕೆಯ ಎರಡು ಡೋಸ್‌ ಗಳನ್ನು ಪಡೆದ ಜನಸಂಖ್ಯೆಯು ಕೇವಲ 11 ಕೋಟಿಗಳಷ್ಟಿದೆ - ಅಥವಾ ಒಟ್ಟು ವಯಸ್ಕ ಜನಸಂಖ್ಯೆಯ ಶೇ. 9 ಕ್ಕಿಂತ ಕಡಿಮೆ ಇದೆ.

ಸರ್ಕಾರದ ಟಿಪ್ಪಣಿಯ ಪ್ರಕಾರ, ಆಗಸ್ಟ್ ಮತ್ತು ಡಿಸೆಂಬರ್ ನಡುವೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ನಿಂದ 136 ಕೋಟಿ ಡೋಸ್‌ಗಳನ್ನು ಭಾರತದಲ್ಲಿ ತಯಾರಿಸಲಾಗುವುದು ಎಂದು ಹೇಳಿದೆ.

ರಾಜ್ಯಗಳಿಗೆ ಇದುವರೆಗೆ ಸುಮಾರು 52 ಕೋಟಿ ಡೋಸ್ ಲಸಿಕೆಗಳನ್ನು ಪೂರೈಸಲಾಗಿದೆ, ಡಿಸೆಂಬರ್ ವೇಳೆಗೆ ಈ ಎರಡು ಲಸಿಕೆಗಳ ಒಟ್ಟು 188 ಕೋಟಿ ಡೋಸ್‌ಗಳು ಪೂರೈಕೆಯಾಗಬಹುದು.

SCROLL FOR NEXT