ಸಾಂದರ್ಭಿಕ ಚಿತ್ರ 
ದೇಶ

ಬ್ಲೂಟೂತ್ ಹೆಡ್ ಫೋನ್‌ ಸ್ಪೋಟಗೊಂಡು ಯುವಕ ಸಾವು

ಬ್ಲೂಟೂತ್‌ ಹೆಡ್‌ ಫೋನ್‌ ಯುವಕನೊಬ್ಬನ ಪ್ರಾಣವನ್ನೇ ತೆಗೆದಿದೆ. ಬ್ಲೂಟೂತ್ ಹೆಡ್ ಫೋನ್ಸ್‌ ಸಹಾಯದಿಂದ ಫೋನ್‌ ನಲ್ಲಿ ಮಾತನಾಡುತ್ತಿದ್ದಾಗ ದಿಢೀರ್‌ ಸ್ಫೋಟ ಸಂಭವಿಸಿ 28 ವರ್ಷದ ಯುವಕ ಸಾವನ್ನಪ್ಪಿದ್ದಾನೆ.

ಜೈಪುರ್: ಬ್ಲೂಟೂತ್‌ ಹೆಡ್‌ ಫೋನ್‌ ಯುವಕನೊಬ್ಬನ ಪ್ರಾಣವನ್ನೇ ತೆಗೆದಿದೆ. ಬ್ಲೂಟೂತ್ ಹೆಡ್ ಫೋನ್ಸ್‌ ಸಹಾಯದಿಂದ ಫೋನ್‌ ನಲ್ಲಿ ಮಾತನಾಡುತ್ತಿದ್ದಾಗ ದಿಢೀರ್‌ ಸ್ಫೋಟ ಸಂಭವಿಸಿ 28 ವರ್ಷದ ಯುವಕ ಸಾವನ್ನಪ್ಪಿದ್ದಾನೆ.

ಈ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ನಡೆದಿದೆ. ಜೈಪುರದ ಚೋಮು ಪ್ರದೇಶದ ಉದಯ್‌ ಪುರಿಯಾ ಗ್ರಾಮದ ರಾಕೇಶ್ ಕುಮಾರ್ ನಗರ್‌, ತನ್ನ ಬ್ಲೂಟೂತ್ ಹೆಡ್ ಫೋನ್ ಬಳಸಿ ಫೋನಿನಲ್ಲಿ ಮಾತನಾಡುತ್ತಿದ್ದಾಗ, ಹೆಡ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದರಿಂದ ಯುವಕ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆತ ಮೃತಪಟ್ಟಿದ್ದಾನೆ. ಈ ಸಂಬಂಧ ಡಾ. ಎಲ್.ಎನ್.ರುಂಡ್ಲಾ ಪ್ರತಿಕ್ರಿಯಿಸಿ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದ್ದಾರೆ.

ಬ್ಲೂ ಟೂತ್ ಇಯರ್‌ಫೋನ್‌ಗಳು ಸ್ಫೋಟಗೊಂಡಿರುವುದು ದೇಶದಲ್ಲಿ ಇದೇ ಮೊದಲು ಎಂದು ಅಧಿಕಾರಿಗಳು ಹೇಳುತ್ತಾರೆ. ಬಹುಶಃ ಸ್ಪೋಟ ಸಂಭವಿಸಿದ ಸಮಯದಲ್ಲಿ ಎರಡು ಕಿವಿಗಳಿಗೂ ಗಾಯಗಳಾಗಿವೆ. 

ಏತನ್ಮಧ್ಯೆ, ಬ್ಲೂಟೂತ್ ಇಯರ್‌ ಫೋನ್‌ಗಳು ಸ್ಫೋಟಗೊಂಡು ಯುವಕ ಸಾವನ್ನಪ್ಪಿರುವ ಸುದ್ದಿ ಸಂಚಲನ ಸೃಷ್ಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ