ದೇಶ

ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳಲ್ಲಿ ಸ್ಥಾನ ಪಡೆದ ದೆಹಲಿ ವಿಮಾನ ನಿಲ್ದಾಣ

Lingaraj Badiger

ನವದೆಹಲಿ: ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸತತ ಮೂರನೇ ವರ್ಷವೂ 'ಭಾರತ ಮತ್ತು ಮಧ್ಯ ಏಷ್ಯಾದ ಅತ್ಯುತ್ತಮ' ವಿಮಾನ ನಿಲ್ದಾಣ ಎಂಬ ಗೌರವಕ್ಕೆ ಪಾತ್ರವಾಗಿದೆ.

ಏರ್‌ಪೋರ್ಟ್ ಉದ್ಯಮಕ್ಕೆ ಸಂಬಂಧಿಸಿದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್‌ ನಡೆಸಿದ ಜಾಗತಿಕ ವಿಮಾನ ನಿಲ್ದಾಣ ಗ್ರಾಹಕರ ತೃಪ್ತಿ ಸಮೀಕ್ಷೆಯಲ್ಲಿ ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳಲ್ಲಿ ಭಾರತದ ದೆಹಲಿ ವಿಮಾನ ನಿಲ್ದಾಣ ಸ್ಥಾನ ಪಡೆದಿದೆ.

ರಾಷ್ಟ್ರ ರಾಜಧಾನಿಯಲ್ಲಿರುವ ವಿಮಾನ ನಿಲ್ದಾಣವು ವಿಶ್ವದ ಅಗ್ರ 50 ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ವಿಮಾನ ನಿಲ್ದಾಣವಾಗಿದೆ.

ನಗರದ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(ಐಜಿಐಎ) ನಿರ್ವಹಿಸುತ್ತಿರುವ ಜಿಎಂಆರ್ ನೇತೃತ್ವದ ಒಕ್ಕೂಟ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಡಿಐಎಎಲ್) ಈ ಘೋಷಣೆಯನ್ನು ಮಾಡಿದೆ.

2021 ರ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್‌ನಲ್ಲಿ ಸತತ ಮೂರನೇ ವರ್ಷ ಐಜಿಐಎ 'ಭಾರತ ಮತ್ತು ಮಧ್ಯ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣ' ಎಂದು ಗುರುತಿಸಲ್ಪಟ್ಟಿದೆ ಮತ್ತು ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ಮಾದರಿ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಒದಗಿಸಿದ್ದಕ್ಕಾಗಿ ವಿಮಾನ ನಿಲ್ದಾಣಕ್ಕೆ 'ಕೋವಿಡ್ -19 ಏರ್‌ಪೋರ್ಟ್ ಎಕ್ಸಲೆನ್ಸ್ ಅವಾರ್ಡ್' ನೀಡಲಾಗಿದೆ. ಈ ವಿಭಾಗದಲ್ಲಿ ಭಾರತದ ಏಕೈಕ ವಿಮಾನ ನಿಲ್ದಾಣವಾಗಿದೆ ಎಂದು ಡಿಐಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ವಿಮಾನ ನಿಲ್ದಾಣವು 2020ರಲ್ಲಿ 50ನೇ ಸ್ಥಾನ ಪಡೆದಿತ್ತು. 2021 ರಲ್ಲಿ ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳಲ್ಲಿ 45 ನೇ ಸ್ಥಾನ ಪಡೆದಿದೆ.

SCROLL FOR NEXT