ದೇಶ

ರಾಜ್ಯಸಭೆಯಲ್ಲೂ ಪೂರ್ವಾನ್ವಯ ತೆರಿಗೆ ತಿದ್ದುಪಡಿ ಮಸೂದೆಗೆ ಅಂಗೀಕಾರ

Vishwanath S

ನವದೆಹಲಿ: ತೆರಿಗೆ ವಿಧಿಸುವ ಭಾರತದ ಸಾರ್ವಭೌಮ ಹಕ್ಕನ್ನು ಶಾಸನವು ದುರ್ಬಲಗೊಳಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಭರವಸೆ ನೀಡಿದ್ದು ಆದಾಗ್ಯೂ, ಪೂರ್ವಾನ್ವಯ ತೆರಿಗೆ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ ಸಿಕ್ಕಿದೆ. 

ಆಗಸ್ಟ್ 5ರಂದು ಲೋಕಸಭೆಯಲ್ಲಿ ಈ ಮಸೂದೆಗೆ ಅನುಮೋದನೆ ಸಿಕ್ಕಿತ್ತು. ಈ ಮೂಲಕ ಪೂರ್ವಾನ್ವಯ ತೆರಿಗೆ ರದ್ದಾಗಿದೆ. 2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪೂರ್ವಾನ್ವಯ ತೆರಿಗೆ ಮಸೂದೆಯನ್ನು ಜಾರಿಗೆ ತಂದಿತ್ತು. 

ಇದನ್ನು ವಿರೋಧಿಸಿ ಟೆಲಿಕಾಂ ಕಂಪನಿ ವೊಡಾಫೋನ್, ಎನರ್ಜಿ ಕಂಪನಿಯಾದ ಕೇರ್ನ್ ಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿ ಭಾರತ ಸರ್ಕಾರಕ್ಕೆ ಹಿನ್ನಡೆಯಾದ ಹಿನ್ನಲೆಯಲ್ಲಿ ಈ ಪ್ರಸ್ತಾವ ಮಾಡಲಾಗಿತ್ತು. 

ತೆರಿಗೆ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ಸಿಕ್ಕಿದ್ದರಿಂದ 2012ರ ಮೇ ತಿಂಗಳ ಮುಂಚೆ ಪರೋಕ್ಷವಾಗಿ ಭಾರತೀಯ ಆಸ್ತಿಗಳನ್ನು ವರ್ಗಾವಣೆ ಮಾಡಿದ್ದರಿಂದ ಸಂಗ್ರಹವಾದ ತೆರಿಗೆಗಳನ್ನು ಮನ್ನಾ ಮಾಡಲಾಗುತ್ತದೆ. ಆದರೆ ಅದಕ್ಕಾಗಿ ಕೆಲವು ನಿರ್ದಿಷ್ಟ ಷರತ್ತುಗಳನ್ನು ಪೂರ್ತಿ ಮಾಡಬೇಕಾಗುತ್ತದೆ. ಜೊತೆಗೆ ಬಾಕಿ ಇರುವ ವ್ಯಾಜ್ಯಗಳನ್ನು ವಿಥ್ ಡ್ರಾ ಮಾಡಲಾಗುತ್ತದೆ ಎಂದು ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ.

SCROLL FOR NEXT