ಪ್ರಧಾನಿ ಮೋದಿ 
ದೇಶ

ರಾಜ್ಯಸಭೆಯಲ್ಲಿ ಮತದಾನದ ವೇಳೆ ಗೈರಾಗಿದ್ದ ಬಿಜೆಪಿ ಸಂಸದರ ಪಟ್ಟಿ ಕೇಳಿದ ಪ್ರಧಾನಿ ಮೋದಿ!

ರಾಜ್ಯಸಭೆಯ ಆ.09 ರ ಕಲಾಪದಲ್ಲಿ ವಿಪಕ್ಷಗಳು ಮಂಡಿಸಿದ ನಿರ್ಣಯದ ಮೇಲಿನ ಮತದಾನದ ವೇಳೆ ಗೈರಾಗಿದ್ದ ಬಿಜೆಪಿ ಸಂಸದರ ಹೆಸರಿನ ಪಟ್ಟಿ ನೀಡುವಂತೆ  ಪ್ರಧಾನಿ ಮೋದಿ ಸೂಚಿಸಿದ್ದಾರೆ. 

ನವದೆಹಲಿ: ರಾಜ್ಯಸಭೆಯ ಆ.09 ರ ಕಲಾಪದಲ್ಲಿ ವಿಪಕ್ಷಗಳು ಮಂಡಿಸಿದ ನಿರ್ಣಯದ ಮೇಲಿನ ಮತದಾನದ ವೇಳೆ ಗೈರಾಗಿದ್ದ ಬಿಜೆಪಿ ಸಂಸದರ ಹೆಸರಿನ ಪಟ್ಟಿ ನೀಡುವಂತೆ  ಪ್ರಧಾನಿ ಮೋದಿ ಸೂಚಿಸಿದ್ದಾರೆ. 

ಆ.09 ರ ಕಲಾಪದಲ್ಲಿ ವಿಪಕ್ಷಗಳ ಸದಸ್ಯರು statutory resolution ನಿರ್ಣಯ ಮಂಡಿಸಿದ್ದವು. ಈ ನಿರ್ಣಯದ ಪ್ರಕಾರ ನ್ಯಾಯಮಂಡಳಿ ಸುಧಾರಣಾ ವಿಧೇಯಕವನ್ನು ಆಯ್ಕೆ ಸಮಿತಿಗೆ ಕಳಿಸುವುದಕ್ಕೆ ಆಗ್ರಹಿಸಲಾಗಿತ್ತು. ಆದರೆ ವಿಪಕ್ಷಗಳ ನಿರ್ಣಯ ವಿಫಲವಾಯಿತು. 

ಆ.10 ರಂದು ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಆ.09 ರ ಕಲಾಪದಲ್ಲಿ ವಿಪಕ್ಷಗಳು ಮಂಡಿಸಿದ ನಿರ್ಣಯದ ಮೇಲಿನ ಮತದಾನದ ವೇಳೆ ಗೈರಾಗಿದ್ದ ಬಿಜೆಪಿ ಸಂಸದರ ಹೆಸರಿನ ಪಟ್ಟಿ ನೀಡುವಂತೆ ಸೂಚಿಸಿದ್ದಾರೆ. ಸಂಸದೀಯ ಮಂಡಳಿ ಸಭೆಯಲ್ಲಿ ಒಲಂಪಿಕ್ ಪದಕ ವಿಜೇತರಿಗೆ ಎದ್ದು ನಿಂತು ಕರತಾಡನ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ಇದೇ ವೇಳೆ ಕ್ರೀಡೆಯನ್ನು ಉತ್ತೇಜಿಸಲು ಸಂಸತ್ ಸದಸ್ಯರಿಗೆ ಸೂಚನೆ ನೀಡಿರುವ ಪ್ರಧಾನಿ ಮೋದಿ, ತಮ್ಮ ಕ್ಷೇತ್ರಗಳಲ್ಲಿನ ಜನತೆಯಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಹಾಗೂ ಪೋಷಣ ಅಭಿಯಾನ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಉತ್ತೇಜಿಸುವುದಕ್ಕೆ ಸಂಸದರಿಗೆ ಸೂಚನೆ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT