ತಮ್ಮ ಜಾಗವನ್ನು ವಾಪಸ್ ಪಡೆದ ಪ್ರದೇಶದಲ್ಲಿ ಭೂಮಿಪೂಜೆ ನಡೆಸುತ್ತಿರುವ ಕಾಶ್ಮೀರಿ ಪಂಡಿತರು 
ದೇಶ

ಕಾಶ್ಮೀರಿ ಪಂಡಿತರಿಗೆ ಸೇರಿದ್ದ 9 ಆಸ್ತಿಗಳು ಮಾಲಿಕರಿಗೆ ಹಸ್ತಾಂತರ

ಭಯೋತ್ಪಾದಕರ ದಾಳಿಯಿಂದ ಬೇರೆಡೆಗೆ ವಲಸೆ ಹೋಗಿದ್ದ ಕಾಶ್ಮೀರ  ಪಂಡಿತರಿಗೆ ಸೇರಿದ್ದ 9 ಆಸ್ತಿಗಳನ್ನು ಮೂಲ ಮಾಲಿಕರಿಗೆ ಹಸ್ತಾಂತರ ಮಾಡಲಾಗಿದೆ. 

ಶ್ರೀನಗರ: ಭಯೋತ್ಪಾದಕರ ದಾಳಿಯಿಂದ ಬೇರೆಡೆಗೆ ವಲಸೆ ಹೋಗಿದ್ದ ಕಾಶ್ಮೀರ ಪಂಡಿತರಿಗೆ ಸೇರಿದ್ದ 9 ಆಸ್ತಿಗಳನ್ನು ಮೂಲ ಮಾಲಿಕರಿಗೆ ಹಸ್ತಾಂತರ ಮಾಡಲಾಗಿದೆ. 
 
ಕಾಶ್ಮೀರದಿಂದ ವಲಸೆ ತೆರಳಿದ್ದ ಹಿಂದೂಗಳನ್ನು ಮರಳಿ ಅವರ ತವರು ಪ್ರದೇಶಕ್ಕೆ ಕರೆತರಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ. 

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಈ ಮಾಹಿತಿ ನೀಡಿದ್ದು, ಜಮ್ಮು-ಕಾಶ್ಮೀರ ವಲಸೆ ಸ್ಥಿರ ಆಸ್ತಿ (ಸಂರಕ್ಷಣೆ, ಸಂಕಷ್ಟದ ಮಾರಾಟದಿಂದ ರಕ್ಷಣೆ ಹಾಗೂ ನಿರ್ಬಂಧ) ಕಾಯ್ದೆ 1997, ಅಡಿಯಲ್ಲಿ ಜಮ್ಮು-ಕಾಶ್ಮೀರದ ಜಿಲ್ಲೆಗಳಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ವಲಸಿಗರ ಸ್ಥಿರಾಸ್ತಿಗೆ ಕಾನೂನಾತ್ಮಕವಾಗಿ ಪಾಲಕರಾಗಿದ್ದು, ಒತ್ತುವರಿ, ತೆರವು ಕಾರ್ಯಾಚರಣೆಯಲ್ಲಿ ಸ್ವಯಂ ಪ್ರೇರಿತರಾಗಿ ಕ್ರಮ ಕೈಗೊಳ್ಳಲಿದ್ದಾರೆ. ಇಂತಹ ಪ್ರಕರನಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳನ್ನು ವಲಸೆ ಹೋದಿದ್ದವರು ಸಂಪರ್ಕಿಸಬಹುದಾಗಿದೆ. 

ಮೂಲ ಮಾಲಿಕರಿಗೆ ಇಂತಹ 9 ಆಸ್ತಿಗಳನ್ನು ವಾಪಸ್ ನೀಡಲಾಗಿದೆ ಎಂದು ಜಮ್ಮು-ಕಾಶ್ಮೀರ ಸರ್ಕಾರದ ಮಾಹಿತಿಯನ್ನು ಆಧರಿಸಿ ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಆರ್ಟಿಕಲ್ 370 ರದ್ದು ನಂತರ ಈ ವರೆಗೂ 520 ವಲಸಿಗರು ತಮ್ಮ ತವರಿಗೆ ವಾಪಸ್ಸಾಗಿದ್ದು ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್-2015 ರ ಅಡಿಯಲ್ಲಿ ನೌಕರಿ ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT