ದೇಶ

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಅಜಿತ್ ಪವಾರ್ ಪತ್ರ

Lingaraj Badiger

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ನೆರೆಯ ಕರ್ನಾಟಕದೊಂದಿಗೆ ರಾಜ್ಯದ ಗಡಿ ವಿವಾದವನ್ನು ಪರಿಹರಿಸಲು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿಗೆ ಆಗಸ್ಟ್ 9 ರಂದು ಬರೆದ ಪತ್ರದಲ್ಲಿ, ಮರಾಠಿ ಮಾತನಾಡುವ ಜನರ ಮೇಲೆ ಕರ್ನಾಟಕ ಸರ್ಕಾರದ "ದೌರ್ಜನ್ಯ" ವನ್ನು ನಿಲ್ಲಿಸಲು ಮತ್ತು ಮಹಾರಾಷ್ಟ್ರದಲ್ಲಿ ವಿವಾದಿತ ಪ್ರದೇಶಗಳನ್ನು ಸೇರಿಸಲು ಮುಂದಾಗುವಂತೆ ಮೋದಿಗೆ ಪವಾರ್ ಒತ್ತಾಯ ಮಾಡಿದ್ದಾರೆ.

ಮಹಾರಾಷ್ಟ್ರ ರಾಜ್ಯ ರಚನೆಯಾಗಿ, ಮುಂಬೈ ರಾಜಧಾನಿಯಾಗಿ 60 ವರ್ಷಗಳಿಗಿಂತ ಹೆಚ್ಚಾಗಿದೆ. ಆದರೆ, ಬೆಳಗಾವಿ, ಕಾರವಾರ, ಬೀದರ್, ಭಾಲ್ಕಿ, ನಿಪ್ಪಾಣಿ ಮತ್ತು ಕರ್ನಾಟಕದ ಇತರ ಮರಾಠಿ ಮಾತನಾಡುವ ಪ್ರದೇಶಗಳು ಇನ್ನೂ ಮಹಾರಾಷ್ಟ್ರದಲ್ಲಿಲ್ಲ ಎಂದು ಪವಾರ್ ಹೇಳಿದ್ದಾರೆ.

ಮಹಾರಾಷ್ಟ್ರದ ಜನರು ಮತ್ತು ಮಹಾರಾಷ್ಟ್ರ ಗಡಿ ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳಲ್ಲಿ ವಾಸಿಸುವವರು ಸಮಸ್ಯೆಯನ್ನು ಇನ್ನೂ ಬಗೆಹರಿಸಿಲ್ಲ ಎಂದು ವಿಷಾದಿಸುತ್ತಾರೆ  ಎಂದು ಎನ್‌ಸಿಪಿ ನಾಯಕ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಕೆಲವು ಭಾಗಗಳಾದ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಕೆಲವು ಪ್ರದೇಶಗಳು ನಮ್ಮ ರಾಜ್ಯಕ್ಕೆ ಸೇರಿವೆ ಎಂದು ಮಹಾರಾಷ್ಟ್ರವು ಹೇಳಿಕೊಳ್ಳುತ್ತಿದೆ. ಈ ಪ್ರದೇಶಗಳಲ್ಲಿನ ಹೆಚ್ಚಿನ ಜನಸಂಖ್ಯೆಯು ಮರಾಠಿ ಮಾತನಾಡುವವರಾಗಿದ್ದಾರೆ. 

ಬೆಳಗಾವಿ ಮತ್ತು ಇತರ ಗಡಿ ಪ್ರದೇಶಗಳ ಕುರಿತು ಉಭಯ ರಾಜ್ಯಗಳ ನಡುವಿನ ವಿವಾದವು ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

SCROLL FOR NEXT