ದೇಶ

ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಲಿದ್ದಾರೆ ಈ ಮಾಜಿ ಐಪಿಎಸ್ ಅಧಿಕಾರಿ 

Srinivas Rao BV

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿದೆ ಇದ್ದು ಚುನಾವಣೆ ತಯಾರಿ ಪ್ರಾರಂಭವಾಗಿದೆ. 

ಚುನಾವಣೆ ಸನಿಹವಾಗುತ್ತಿರುವಂತೆಯೇ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಲು ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಉತ್ಸುಕರಾಗಿದ್ದಾರೆ. 

2020 ರ ಮಾರ್ಚ್ ನಲ್ಲಿ ಅವಧಿಗೂ ಮುನ್ನವೇ ಸೇವೆಗೆ ರಾಜೀನಾಮೆ ನೀಡಿದ್ದ ಅಮಿತಾಬ್ ಠಾಕೂರ್ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿಯ ಪತ್ನಿ ನೂತನ್ ಠಾಕೂರ್ ಈ ಸ್ಪರ್ಧೆ ತನ್ನ ಪತಿಯ ತತ್ವ-ಸಿದ್ಧಾಂತಗಳಿಗಾಗಿ ಎಂದು ಹೇಳಿದ್ದಾರೆ. 

"ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ, ಅನುಚಿತ, ದಮನಕಾರಿ, ಕಿರುಕುಳ ಮತ್ತು ತಾರತಮ್ಯದಿಂದ ಕೂಡಿದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಆದ್ದರಿಂದ ಅಮಿತಾಬ್ ಅವರು ಆದಿತ್ಯನಾಥ್ ಸ್ಪರ್ಧಿಸುವ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ನೂತನ್ ಠಾಕೂರ್ ಹೇಳಿದ್ದಾರೆ. 

"ಇದು ತತ್ವ-ಸಿದ್ಧಾಂತಗಳಿಗಾಗಿನ ಸ್ಪರ್ಧೆಯಾಗಿದ್ದು ಯೋಗಿ ಆದಿತ್ಯನಾಥ್ ಅವರ ತಪ್ಪು ನಿರ್ಣಯಗಳನ್ನು ಪ್ರತಿಭಟನೆ ನಡೆಸಲಿದ್ದೇವೆ" ಎಂದು ಹೇಳಿದ್ದಾರೆ. 2028 ರಲ್ಲಿ ನಿವೃತ್ತರಾಗಬೇಕಿದ್ದ ಅಮಿತಾಬ್ ಠಾಕೂರ್ ಗೆ 2021 ರ  ಮಾರ್ಚ್ 23 ನಲ್ಲಿ ಕಡ್ಡಾಯ ನಿವೃತ್ತಿ ನೀಡಲಾಗಿತ್ತು. 

SCROLL FOR NEXT