ದೇಶ

ಧುೃವ ಹೆಲಿಕಾಪ್ಟರ್ ಪತನ: 12 ದಿನಗಳ ನಂತರ ಪೈಲಟ್ ಶವ ಪತ್ತೆ

Srinivasamurthy VN

ನವದೆಹಲಿ: ಜಮ್ಮುವಿನ ಗಡಿಭಾಗದ ರಾಜ್‌ನೀತ್‌ ಸಾಗರ್‌ ಅಣೆಕಟ್ಟೆಯಲ್ಲಿ ಪತನಗೊಂಡಿದ್ದ ಸೇನೆಯ ಧ್ರುವ್ ಹೆಲಿಕಾಪ್ಟರ್‌ನ ಪೈಲಟ್ ಒಬ್ಬರ ಶವ ಅಪಘಾತವಾದ 12 ದಿನದ ನಂತರ ಭಾನುವಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಸೇನಾ ಮೂಲಗಳ ಪ್ರಕಾರ ಹೆಲಿಕಾಪ್ಟರ್ ನ ಪೈಲಟ್ ಲೆಫ್ಟಿನಂಟ್ ಕರ್ನಲ್‌ ಎ.ಎಸ್.ಬಾತ್ ಅವರ ಶವವು ಅಣೆಕಟ್ಟೆಯ 75.9 ಮೀಟರ್‌ ಆಳದಲ್ಲಿ ಪತ್ತೆಯಾಯಿತು ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತೆಯೇ ನಾಪತ್ತೆಯಾಗಿರುವ ಮತ್ತೋರ್ವ ಪೈಲಟ್ ನ ಶವಕ್ಕಾಗಿ ಶೋಧ ಮುಂದುವರೆದಿದೆ.

ಈ ಹಿಂದೆ ಇಬ್ಬರು ಪೈಲಟ್‌ಗಳಿದ್ದ ಧ್ರುವ್ ಹೆಲಿಕಾಪ್ಟರ್ ಆ. 3ರಂದು ಅಣೆಕಟ್ಟೆಯಲ್ಲಿ ಪತನಗೊಂಡಿತ್ತು. ನಾಪತ್ತೆಯಾಗಿದ್ದ ಪೈಲಟ್‌ಗಳ ಪತ್ತೆಗೆ ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ರಾಜ್ಯ ಪೊಲೀಸ್‌ ಪಡೆಯ ಸಿಬ್ಬಂದಿ ಜಂಟಿಯಾಗಿ ಸುಮಾರು 500 ಅಡಿ ಆಳದ ಅಣೆಕಟ್ಟೆಯಲ್ಲಿ ಶೋಧ ಕಾರ್ಯ  ಕೈಗೊಂಡಿದ್ದರು.

ಸತತ 12 ದಿನಗಳ ಕಾರ್ಯಾಚರಣೆ ಬಳಿಕ ಇಂದು ಓರ್ವ ಪೈಲಟ್ ಶವ ಪತ್ತೆಯಾಗಿದೆ.

SCROLL FOR NEXT