ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಗೆ ಇಡಿ ಹೊಸ ಸಮನ್ಸ್ 

Shilpa D

ಮುಂಬಯಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಸಚಿವ ಅನಿಲ್ ದೇಶಮುಖ್ ಅವರಿಗೆ ಬುಧವಾರ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

71 ವರ್ಷದ ಎನ್ ಸಿಪಿ ಮುಖಂಡ ಅನಿಲ್ ಅವರಿಗೆ ಸುಪ್ರೀಂಕೋರ್ಟ್ ಮದ್ಯಂತರ ಜಾಮೀನು ನಿರಾಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಆಗಸ್ಟ್ 18 ರಂದು ದಕ್ಷಿಣ ಮುಂಬೈನ ಇಡಿ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ದೇಶ್ ಮುಖ್ ಅವರಿಗೆ ಸೂಚಿಸಲಾಗಿದೆ. ಐದನೇ ಬಾರಿಗೆ ನೋಟಿಸ್ ನೀಡಲಾಗಿತ್ತು.

ಈ ಪ್ರಕರಣದಲ್ಲಿ ಮತ್ತಷ್ಟು ಹೇಳಿಕೆಯನ್ನ ದಾಖಲಿಸಲು ಸಂಸ್ಥೆ ಬಯಸಿದ್ದರಿಂದ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಯಮಗಳ ಅಡಿಯಲ್ಲಿ ಇದನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದ ವಿಚಾರಣೆಗಾಗಿ ದೇಶಮುಖ್ ಕೊನೆಯದಾಗಿ ಹಾಜರಾಗುವುದನ್ನು ಬಿಟ್ಟು, ಇಡಿ ಕ್ರಮವನ್ನು ನ್ಯಾಯಸಮ್ಮತವಲ್ಲ ಎಂದು ಹೇಳಿದ್ದಾರೆ. ಇಡಿಗೆ ಹಾಜರಾಗದ ಅನಿಲ್ ದೇಶಮುಖ್ ಅವರ ಪತ್ನಿ ಮತ್ತು ಪುತ್ರನಿಗೂ  ಇಡಿ ಸಮನ್ಸ್ ನೀಡಿತ್ತು.

SCROLL FOR NEXT