ದೇಶ

ಬಿಹಾರದಲ್ಲಿ ಕೇವಲ 11 ಹೊಸ ಕೊರೋನಾ ಪ್ರಕರಣ ವರದಿ

Lingaraj Badiger

ಪಾಟ್ನಾ: ಬಿಹಾರದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ತೆಗೆದುಕೊಂಡ ಕ್ರಮಗಳು ಫಲ ನೀಡುತ್ತಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೇವಲ 11 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದಲ್ಲಿ ಶುಕ್ರವಾರ ವರದಿಯಾದ 11 ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ ನಾಲ್ಕು ಪಾಟ್ನಾದಿಂದ ಮತ್ತು ಉಳಿದ ಆರು ಪ್ರಕರಣಗಳು ಇತರೆ ಜಿಲ್ಲೆಗಳಿಂದ ವರದಿಯಾಗಿವೆ.

ಕೊರೋನಾ ಪ್ರಕರಣಗಳು ಕ್ಷೀಣಿಸುತ್ತಿರುವ ನಡುವೆ, ಬಿಹಾರದ ಪಾಟ್ನಾ ಮತ್ತು ಇತರ ಜಿಲ್ಲೆಗಳು ಲಸಿಕೆಯ ವಿಷಯದಲ್ಲಿ ದೇಶದ ಅಗ್ರ 754 ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ರಾಜ್ಯ ರಾಜಧಾನಿ 10 ನೇ ಸ್ಥಾನದಲ್ಲಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರೋಗ್ಯ ಸಚಿವರ ಮಾರ್ಗದರ್ಶನದಂತೆ ಕೆಲಸ ಮಾಡುವ 
ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರತಯ್ ಅಮೃತ್ ಅವರು ಈ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದು. ರಾಜ್ಯವು ಪತ್ತೆಹಚ್ಚುವಿಕೆ, ಪರೀಕ್ಷೆ ಮತ್ತು ಚಿಕಿತ್ಸೆ (ಟಿ -3) ವಿಧಾನದ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ.

"ವಿವಿಧ ಸಂವಹನ ವಿಧಾನಗಳ ಮೂಲಕ ನಾವು ಸುರಕ್ಷತಾ ಪ್ರೋಟೋಕಾಲ್‌ ಅನುಸರಿಸುವ ಬಗ್ಗೆ ಜನಜಾಗೃತಿ ಮೂಡಿಸಿದ್ದೇವೆ ಮತ್ತು ಕೋವಿಡ್ ಪರೀಕ್ಷೆಯನ್ನು ತೀವ್ರಗೊಳಿಸಿದ್ದೇವೆ. ಮಾಸ್ಕ್ ಧರಿಸುವ ಜನರ ಸಂಖ್ಯೆ ಶೇ. 80-90ಕ್ಕೆ ಏರಿದಾಗ ಉತ್ತಮ ಫಲಿತಾಂಶ ಬರಲಾರಂಭಿಸಿತು" ಎಂದು ಅಮೃತ್ ಹೇಳಿದ್ದಾರೆ.

SCROLL FOR NEXT