ಸಂಗ್ರಹ ಚಿತ್ರ 
ದೇಶ

ರಾಹುಲ್ ಗಾಂಧಿ ಶುದ್ಧ ಅಪ್ರಯೋಜಕ, ಆತ ಒಬ್ಬ ಬೀಡಾಡಿ ದನ: ಕೇಂದ್ರ ಸಚಿವ ದಾನ್ವೆ ಟೀಕೆಗೆ ಕಾಂಗ್ರೆಸ್ ಆಕ್ರೋಶ

ದಾನ್ವೆ ಅವರ ಹೇಳಿಕೆ ಅಸಭ್ಯವ್ಬಾಗಿದ್ದು, ಅಘಾತ ತಂದಿದೆ, ಈ ಕೂಡಲೆ ಅವರನ್ನು ಸಚಿವ ಸ್ಥಾನದಿಂದ ಕೆಳಕ್ಕಿಳಿಸುವಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಒತ್ತಾಯಿಸಿದೆ. 

ಮುಂಬೈ: ಕೇಂದ್ರ ಸಚಿವ ರಾವ್ ಸಾಹೆಬ್ ದಾನ್ವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಶುದ್ಧ ಅಪ್ರಯೋಜಕ ಎಂದು ಮಾಡಿದ್ದ ಟೀಕೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. 

ದಾನ್ವೆ ಅವರು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದ ಬಿಜೆಪಿ ರಾಲಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಭಾಷಣ ಮಾಡುವ ವೇಳೆ, ರಾಹುಲ್ ಗಾಂಧಿಯವರಿಂದ ಯಾರಿಗೂ ಉಪಯೋಗವಿಲ್ಲ ಎಂದು ಅವಹೇಳನ ಮಾಡಿದ್ದರು. ಅಷ್ಟಕ್ಕೇ ಸುಮ್ಮನಾಗದ ದಾನ್ವೆ ರಾಹುಲ್ ಅವರನ್ನು ಬೀಡಾಡಿ ದನಕ್ಕೆ ಹೋಲಿಕೆ ಮಾಡಿದ್ದರು. 

ಮಹಾರಾಷ್ಟ್ರದ ಕಡೆ ಒಮ್ಮೊಮ್ಮೆ ಆಗತಾನೇ ಹುಟ್ಟಿದ ಕರುವನ್ನು ದೇವರಿಗೆಂದು ಬಿಟ್ಟುಬಿಡುವ ಪದ್ಧತಿ ಇದೆ. ಅದು ಬೀಡಾಡಿ ದನವಾಗಿ ಬೆಳೆಯುತ್ತದೆ. ಅದು ಯಾರ ಹೊಲಕ್ಕೆ ನುಗ್ಗಿ ತಿಂದರೂ ಯಾರೇನೂ ಮಾಡುವುದಿಲ್ಲ. ರಾಹುಲ್ ಅಂಥ ಬೀಡಾಡಿ ದನ ಎಂದು ದಾನ್ವೆ ಭಾಷಣದಲ್ಲಿ ಹೇಳಿದ್ದರು.

ದಾನ್ವೆ ಅವರ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ದಾನ್ವೆ ಅವರ ಹೇಳಿಕೆ ಅಸಭ್ಯವ್ಬಾಗಿದ್ದು, ಅಘಾತ ತಂದಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಕೂಡಲೆ ದಾನ್ವೆ ಅವರನ್ನು ಸಚಿವ ಸ್ಥಾನದಿಂದ ಕೆಳಕ್ಕಿಳಿಸುವಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಒತ್ತಾಯಿಸಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್