ದೇಶ

ರಾಷ್ಟ್ರೀಯ ಸ್ವತ್ತನ್ನು ಕೇಂದ್ರ ಸರ್ಕಾರ ತನ್ನ ಸ್ನೇಹಿತರಿಗೆ ನೀಡುತ್ತಿದೆ: ಪ್ರಿಯಾಂಕಾ ಗಾಂಧಿ

Lingaraj Badiger

ನವದೆಹಲಿ:  ಕೇಂದ್ರ ಸರ್ಕಾರದ ಸ್ವತ್ತುಗಳ ನಗದೀಕರಣ ಯೋಜನೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೋದಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಕೇಂದ್ರ ಸರ್ಕಾರವು ಸ್ವಾವಲಂಬನೆಯ ಮಾತುಗಳನ್ನಾಡುತ್ತಲೇ, ಇಡೀ ಸರ್ಕಾರವನ್ನು ತನ್ನ "ಬಿಲಿಯನೇರ್ ಸ್ನೇಹಿತರ" ಮೇಲೆ ಅವಲಂಬಿತವಾಗುವಂತೆ ಮಾಡಿದೆ. ಎಲ್ಲಾ ಕೆಲಸಗಳನ್ನೂ ಕೋಟ್ಯಧಿಪತಿ ಸ್ನೇಹಿತರಿಗಾಗಿ ಮಾಡಲಾಗುತ್ತಿದೆ. ಎಲ್ಲಾ ಸಂಪತ್ತು ಅವರಿಗಾಗಿ" ಎಂದು ಪ್ರಿಯಾಂಕಾ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.

"ಕಳೆದ 70 ವರ್ಷಗಳಿಂದ ದೇಶದ ಜನರು ಸೃಷ್ಟಿಸಿದ ಲಕ್ಷಾಂತರ ಮೌಲ್ಯದ ಆಸ್ತಿಗಳನ್ನು ಸರ್ಕಾರ ತನ್ನ ಬಿಲಿಯನೇರ್ ಸ್ನೇಹಿತರಿಗೆ ನೀಡುತ್ತಿದೆ" ಎಂದು ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆಯಷ್ಟೇ 6 ಲಕ್ಷ ಕೋಟಿ ರೂಪಾಯಿಯ ‘ರಾಷ್ಟ್ರೀಯ ನಗದೀಕರಣ ಯೋಜನೆ’(ಎನ್‌ಎಂಪಿ) ಘೋಷಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈ ಯೋಜನೆಯಲ್ಲಿ ಪ್ರಮುಖವಾಗಿ ರಸ್ತೆಗಳು, ರೈಲ್ವೆ ಹಾಗೂ ವಿದ್ಯುತ್ ಗ್ರಿಡ್‌ಗಳೂ ಸೇರಿವೆ. ಆದರೆ ಭೂಮಿ ಮಾರಾಟ ಈ ಪಟ್ಟಿಯಲ್ಲಿ ಸೇರಿಲ್ಲ ಎಂದು ಹೇಳಿದ್ದರು.

ಕೇಂದ್ರ ಸರ್ಕಾರವು ರಾಷ್ಟ್ರೀಯ ನಗದೀಕರಣ ಯೋಜನೆ ಅಡಿ 2022ರ ಹಣಕಾಸು ವರ್ಷದಿಂದ 2025 ರ ಹಣಕಾಸು ವರ್ಷದವರೆ ಮುಂದಿನ ನಾಲ್ಕು ವರ್ಷಗಳಲ್ಲಿ ಮೂಲಸೌಕರ್ಯ ಆಸ್ತಿಗಳನ್ನು ಮಾರಾಟ ಮಾಡಲಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

SCROLL FOR NEXT