ದೇಶ

ಕೇಂದ್ರದ ವಿರುದ್ಧ ಮಾತಾಡುವವರಿಗೆ ಜೈಲು; 1200 ಕಾಶ್ಮೀರಿಗಳು ಇನ್ನೂ ಸೆರೆಯಲ್ಲಿಯೇ ಇದ್ದಾರೆ: ಮೆಹಬೂಬಾ ಮುಫ್ತಿ

Srinivas Rao BV

ಶ್ರೀನಗರ: ಕೇಂದ್ರದ ವಿರುದ್ಧ ಮಾತನಾಡುತ್ತಿರುವವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

ಗುಪ್ಕಾರ್ ಮೈತ್ರಿಕೂಟ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ ಆರ್ಟಿಕಲ್ 370 ಹಾಗೂ 35ಎ, ರಾಜ್ಯದ ಸ್ಥಾನಮಾನವನ್ನು ಪುನಃ ಸ್ಥಾಪಿಸಲು ನಿರ್ಣಯ ಕೈಗೊಂಡ ಬೆನ್ನಲ್ಲೇ ಮೆಹಬೂಬಾ ಮುಫ್ತಿ ಮಾತನಾಡಿದ್ದು, ಜಮ್ಮು-ಕಾಶ್ಮೀರದ ಗಾಂಧಿ, ನೆಹರು, ಕಾಂಗ್ರೆಸ್ ನ  ಜಾತ್ಯಾತೀತ ಭಾರತವನ್ನು ಒಪ್ಪಿಕೊಂಡಿತ್ತು. ಈಗ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿರುವವರನ್ನು ಜೈಲಿಗೆ ಕಳಿಸಲಾಗುತ್ತಿದೆ ಎಂದು ಮೆಹಬೂಬಾ ಮುಫ್ತಿ ಗಂಭೀರ ಆರೋಪ ಮಾಡಿದ್ದಾರೆ. 

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಮೆಹೆಬೂಬಾ ಮುಫ್ತಿ, ಪಿಡಿಪಿಯ ನಾಯಕರೂ ಹಿಂದೆ ಸರಿದರೂ ಕಾರ್ಯಕರ್ತರು ಬೆಂಬಲವಾಗಿ ನಿಂತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಗೆ ಕೊರತೆಗಳಿರಬಹುದು ಆದರೆ ಕಾಶ್ಮೀರ ಒಪ್ಪಿದ್ದು ನೆಹರು, ಗಾಂಧಿಯ ಆದರ್ಶಗಳನ್ನು, ಕಾಶ್ಮೀರ ಭಾರತದ ಜೊತೆ ಸೇರುವುದಕ್ಕೆ ಕಾಂಗ್ರೆಸ್ ನ ಮಹತ್ವದ ಪಾತ್ರವಿದೆ ಎಂದು ಮೆಹೆಬೂಬಾ ಮುಫ್ತಿ ಹೇಳಿದ್ದಾರೆ.

ಕಾಶ್ಮೀರದ ಜನತೆ ನಿರುತ್ಸಾಹಗೊಳ್ಳಬಾರದು, ಭಾರತ ಸರ್ಕಾರ 70 ವರ್ಷಗಳಲ್ಲಿ ಸೃಷ್ಟಿಸಲಾದ ರಸ್ತೆ, ಪೆಟ್ರೋಲ್ ಪಂಪ್, ವಿಮಾನ ನಿಲ್ದಾಣ ರೈಲ್ವೆ ನಿಲ್ದಾಣಗಳನ್ನು ಮಾರಾಟ ಮಾಡಲು ಮುಂದಾಗಿದೆ. ಇಡೀ ದೇಶವನ್ನೇ ಮಾರಾಟ ಮಾಡಿರುವಾಗ ಅವರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ ಎಂದು ಮುಫ್ತಿ ಪ್ರಶ್ನಿಸಿದ್ದಾರೆ.

SCROLL FOR NEXT