ದೇಶ

ಅಕ್ರಮ ಔಷಧ ದಾಸ್ತಾನು: ಗಂಭೀರ್ ಫೌಂಡೇಶನ್, ಎಎಪಿ ಶಾಸಕರ ವಿರುದ್ಧದ ವಿಚಾರಣೆಯನ್ನು ಮುಂದೂಡಿದ ಕೋರ್ಟ್

Vishwanath S

ನವದೆಹಲಿ: ಗೌತಮ್ ಗಂಭೀರ್ ಫೌಂಡೇಶನ್ ಮತ್ತು ಇಬ್ಬರು ಎಎಪಿ ನಾಯಕರಿಂದ ಕೋವಿಡ್ -19 ಔಷಧಿಗಳ ಅಕ್ರಮ ದಾಸ್ತಾನು ಮತ್ತು ವಿತರಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಐದು ತಿಂಗಳಿಗಿಂತ ಹೆಚ್ಚು ಕಾಲ ಮುಂದೂಡಿದೆ.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರೀತು ರಾಜ್ ಈ ಪ್ರಕರಣವನ್ನು 2022j ಫೆಬ್ರವರಿ 7 ರಂದು ವಿಚಾರಣೆ ನಡೆಸಲಿದ್ದಾರೆ.

ಔಷಧ ನಿಯಂತ್ರಣ ವಿಭಾಗವು ಗೌತಮ್ ಗಂಭೀರ್ ಪ್ರತಿಷ್ಠಾನದ ಸಿಇಒ ಅಪ್ರಜಿತ ಸಿಂಗ್, ಅಪ್ರಜಿತ್ ಸಿಂಗ್, ಸೀಮಾ ಗಂಭೀರ್, ಗೌತಮ್ ಗಂಭೀರ್ ಮತ್ತು ನತಾಶಾ ಗಂಭೀರ್ ವಿರುದ್ಧ ಸೆಕ್ಷನ್ 18 (ಸಿ) ಅಡಿಯಲ್ಲಿ 27(ಬಿ)(2)ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರಾದ ಪ್ರವೀಣ್ ಕುಮಾರ್ ಮತ್ತು ಇಮ್ರಾನ್ ಹುಸೇನ್ ವಿರುದ್ಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದೆ.

ಸೆಕ್ಷನ್ 18(ಸಿ) ಪರವಾನಗಿ ಇಲ್ಲದ ಔಷಧಗಳ ತಯಾರಿಕೆ, ಮಾರಾಟ ವಿತರಣೆಯನ್ನು ನಿಷೇಧಿಸುತ್ತದೆ. ಸೆಕ್ಷನ್ 27 (ಬಿ)(ii) ಮಾರಾಟ, ಮಾನ್ಯ ಪರವಾನಗಿ ಇಲ್ಲದ ವಿತರಣೆಯನ್ನು ಒಂದು ಅವಧಿಗೆ ಜೈಲು ಶಿಕ್ಷೆಗೆ ಒಳಪಡಿಸುತ್ತದೆ. ಅದರಂತೆ ದಂಡದೊಂದಿಗೆ ಮೂರು ವರ್ಷದಿಂದ ಐದು ವರ್ಷದವರೆಗೂ ವಿಸ್ತರಿಸಬಹುದಾಗಿದೆ. 

ಕಳೆದ ಜುಲೈನಲ್ಲಿ ನ್ಯಾಯಾಧೀಶರು ಎಲ್ಲಾ ಆರೋಪಿಗಳಿಗೂ ಸಮನ್ಸ್ ನೀಡಿದ್ದು ಆಗಸ್ಟ್ 26 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು. 

SCROLL FOR NEXT