ದೇಶ

'ದೇಶದ ಆಸ್ತಿಯನ್ನು ಆಯ್ದ ಬಂಡವಾಳಗಾರರಿಗೆ ಮಾರಾಟ ಮಾಡಿ ರಾಷ್ಟ್ರವನ್ನು ದಿವಾಳಿ ಮಾಡುತ್ತಿದೆ': ಖರ್ಗೆ

Shilpa D

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸರ್ಕಾರವು ತನ್ನ ಕಾರ್ಯತಂತ್ರವನ್ನು ಹೇಗೆ ರೂಪಿಸಲಿದೆ ಎಂಬುದನ್ನು ಕಾಂಗ್ರೆಸ್ ನೋಡಲಿದೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಚರ್ಚಿಸಲು ಕೇಂದ್ರ ಸರ್ಕಾರ ಕರೆದ ಸರ್ವಪಕ್ಷ ಸಭೆಯಲ್ಲಿ  ಭಾಗವಹಿಸುವ ಮೊದಲು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಖರ್ಗ,  ನಾವು ಸರ್ಕಾರದ ಪ್ರಸ್ತಾವನೆಯನ್ನು ನೋಡುತ್ತೇವೆ. ನಮಗೆ ಯಾವುದೇ ಅನುಮಾನ ಅಥವಾ ಪ್ರಶ್ನೆ ಇದ್ದರೆ ನಾವು ಅದನ್ನು ಕೇಳುತ್ತೇವೆ. ಎಲ್ಲಾ ಪಕ್ಷದ ಸದಸ್ಯರು ಇರುತ್ತಾರೆ. ನಾವು ಕೂಡ ಮೊದಲು ಸರ್ಕಾರದ ನಿಲುವನ್ನು ನೋಡುತ್ತೇವೆ ಮತ್ತು ಅವರು ಮುಂದಿನ ದಾರಿಯನ್ನು ಹೇಗೆ ಯೋಜಿಸುತ್ತಿದ್ದಾರೆ ಎಂದು ನೋಡುತ್ತೇವೆ ಎಂದು ತಿಳಿಸಿದ್ದಾರೆ.

ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಚರ್ಚಿಸಲು ಕೇಂದ್ರವು ಗುರುವಾರ ಸರ್ವಪಕ್ಷಗಳ ಸಭೆಯನ್ನು ಕರೆದಿತ್ತು.

ಕೇಂದ್ರವು ದೇಶದ ಆಸ್ತಿಯನ್ನು ಆಯ್ದ ಬಂಡವಾಳಗಾರರಿಗೆ ಮಾರಾಟ ಮಾಡಲು ಮತ್ತು ರಾಷ್ಟ್ರವನ್ನು ದಿವಾಳಿಯನ್ನಾಗಿ ಮಾಡಲು ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷವು ದೇಶವನ್ನು ದಾರಿ ತಪ್ಪಿಸುತ್ತಿಲ್ಲ. ಕಳೆದ 70 ವರ್ಷಗಳಲ್ಲಿ ನಾವು ಸೃಷ್ಟಿಸಿದ ಆಸ್ತಿ, ಪಂಡಿತ್ ಜವಾಹರಲಾಲ್ ನೆಹರು ಅವರು ಸಾರ್ವಜನಿಕ ವಲಯದಲ್ಲಿ ರಚಿಸಿದ ಆಸ್ತಿಗಳನ್ನು, ಕೇಂದ್ರ ಸರ್ಕಾರ ಮಾರಾಟ ಮಾಡಲು ಸಂಚು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಆಸ್ತಿಗಳನ್ನು ಮಾರಾಟ ಮಾಡುವುದು ಅವರ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

SCROLL FOR NEXT