ದೇಶ

ಭಾರತದ ಕಾರ್ಯತಂತ್ರ ಗುರಿಗಳ ಈಡೇರಿಕೆಗೆ ದೀರ್ಘಾವಧಿಯಲ್ಲಿ ಚೀನಾ ಸವಾಲು: ಐಎಎಫ್ ಮುಖ್ಯಸ್ಥ 

Srinivas Rao BV

ನವದೆಹಲಿ: ಚೀನಾ ವಾಯುಪಡೆಯ ಕಾರ್ಯಾಚರಣೆಯ ಮೂಲಸೌಕರ್ಯಗಳನ್ನು ಕ್ಷಿಪ್ರಗತಿಯಲ್ಲಿ ವರ್ಧಿಸಿಕೊಳ್ಳುತ್ತಿದ್ದು, ಭಾರತದ ಕಾರ್ಯತಂತ್ರ ಗುರಿಗಳ ಈಡೇರಿಕೆಗೆ ದೀರ್ಘಾವಧಿಯಲ್ಲಿ ಚೀನಾ ಸವಾಲಾಗಲಿದೆ ಎಂದು ಐಎಎಫ್ ಮುಖ್ಯಸ್ಥ ವಿವೇಕ್ ರಾಮ್ ಚೌಧರಿ ಹೇಳಿದ್ದಾರೆ. 

ಸೆಮಿನಾರ್ ನಲ್ಲಿ ಮಾತನಾಡಿರುವ ವಿವೇಕ್ ರಾಮ್ ಚೌಧರಿ, ಇಂದಿನ ಭಾರತಕ್ಕೆ ಅಗತ್ಯ ಸಂದರ್ಭದಲ್ಲಿ ಸೂಕ್ತವಾಗಿ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಹಾಗೂ ಇಚ್ಛೆ ಇದೆ ಎಂಬ ದೃಢವಾದ ಸಂದೇಶ ಜಾಗತಿಕ ಮಟ್ಟದಲ್ಲಿ ದೆಹಲಿಯಿಂದ ಹೋಗಬೇಕಾದ ಅಗತ್ಯವಿದೆ ಎಂದು ಐಎಎಫ್ ಮುಖ್ಯಸ್ಥರು ತಿಳಿಸಿದ್ದಾರೆ. 

ಚೀನಾದ ಆಧಿಪತ್ಯ ಸ್ಥಾಪಿಸುವ ಹಾಗೂ ಕೆಲವೊಮ್ಮೆ ಸಾಲದ ಸುಳಿಗೆ ಬೀಳಿಸುವ ನೀತಿಗಳು, ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ವಾಣಿಜ್ಯ ಹಾಗೂ ರಕ್ಷಣಾ ವಿಷಯಗಳಲ್ಲಿ ಭಾರತಕ್ಕೆ ಹತೋಟಿ ಸಾಧಿಸುವುದಕ್ಕೆ ಅವಕಾಶ ನೀಡಲಿದೆ ಎಂದು ವಾಯು ಪಡೆ ಮುಖ್ಯಸ್ಥರು ಹೇಳಿದ್ದಾರೆ.

ಇದೇ ವೇಳೆ ಪಾಕಿಸ್ತಾನದ ವಾಯುಪಡೆಯ ಬಗ್ಗೆಯೂ ವಾಯುಪಡೆ ಮುಖ್ಯಸ್ಥರು ಮಾತನಾಡಿದ್ದು, "ಪಾಕಿಸ್ತಾನ ವಾಯುಪಡೆ ವಾಯು ರಕ್ಷಣೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಹೊಸ ಯುದ್ಧವಿಮಾನಗಳನ್ನು ಪಡೆಯುತ್ತಿದೆ. ಚೀನಾ ಹಾಗೂ ಪಾಕಿಸ್ತಾನ ದೇಶಗಳ ವಾಯುಪಡೆಗಳು ಸುಧಾರಿತ ಸೇನಾ ಸಾಮರ್ಥ್ಯವನ್ನು ಹೊಂದುತ್ತಿದ್ದು ನನ್ನ ಊಹೆಯ ಪ್ರಕಾರ ಭಾರತದ ಕಾರ್ಯತಂತ್ರ ಗುರಿಗಳ ಈಡೇರಿಕೆಗೆ ದೀರ್ಘಾವಧಿಯಲ್ಲಿ ಚೀನಾ ಸವಾಲಾಗಲಿದೆಯೆಂದು ಐಎಎಫ್ ಮುಖ್ಯಸ್ಥ ವಿವೇಕ್ ರಾಮ್ ಚೌಧರಿ ಹೇಳಿದ್ದಾರೆ.

SCROLL FOR NEXT