ದೀಪಾ ಜಯಕುಮಾರ್ 
ದೇಶ

ತಮಿಳುನಾಡು: ಮಾಜಿ ಸಿಎಂ ಜಯಲಲಿತಾ ನಿವಾಸದ ಬೀಗದ ಕೀ ಸೊಸೆ ದೀಪಾ ಜಯಕುಮಾರ್ ಗೆ ಹಸ್ತಾಂತರ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಪೋಯಸ್ ಗಾರ್ಡನ್‍ನಲ್ಲಿರುವ ವೇದ ನಿವಾಸವು ಸೋದರ ಸೊಸೆ ದೀಪಾ ಜಯಕುಮಾರ್ ಅವರ ಕೈ ಸೇರಿದೆ.

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಪೋಯಸ್ ಗಾರ್ಡನ್‍ನಲ್ಲಿರುವ ವೇದ ನಿವಾಸವು ಸೋದರ ಸೊಸೆ ದೀಪಾ ಜಯಕುಮಾರ್ ಅವರ ಕೈ ಸೇರಿದೆ.

ಚೆನ್ನೈ ಜಿಲ್ಲಾಡಳಿತವು ಮನೆಯ ಕೀಯನ್ನು ದೀಪಾ ಜಯಕುಮಾರ್ ಅವರಿಗೆ ಹಸ್ತಾಂತರಿಸಿದೆ. ನನ್ನ ಚಿಕ್ಕಮ್ಮನ ಅನುಪಸ್ಥಿತಿಯಲ್ಲಿ ನಾನು ಇದೇ ಮೊದಲ ಬಾರಿಗೆ ಈ ಮನೆಗೆ ಭೇಟಿ ನೀಡುತ್ತಿದ್ದೇನೆ. ಚಿಕ್ಕಮ್ಮ ಇಲ್ಲದ ಮನೆ ಈಗ ಬರಡು ಮತ್ತು ಖಾಲಿ ಎನಿಸುತ್ತಿದೆ. ನನ್ನ ಚಿಕ್ಕಮ್ಮ ಬಳಸುತ್ತಿದ್ದ ಪೀಠೋಪಕರಣಗಳನ್ನು ತೆಗೆದುಹಾಕಲಾಗಿದೆ ಎಂದು ದೀಪಾ  ಆರೋಪಿಸಿದ್ದಾರೆ.

ನವೆಂಬರ್ 24 ರಂದು ಮದ್ರಾಸ್ ಹೈಕೋರ್ಟ್‍ನ ಏಕಸದಸ್ಯ ಪೀಠವು ಜಯಲಲಿತಾ ಅವರ ನಿವಾಸ ವೇದ ನಿಲಯವನ್ನು ಸ್ವಾಧೀನಪಡಿಸಿಕೊಳ್ಳುವ ಆದೇಶವನ್ನು ರದ್ದುಗೊಳಿಸಿ ಮನೆಯನ್ನು ವಾರಸುದಾರರಿಗೆ ಹಸ್ತಾಂತರಿಸುವಂತೆ ಆದೇಶಿಸಿತು.

ಹಿಂದಿನ ಎಐಎಡಿಎಂಕೆ ಸರ್ಕಾರ ಜಯಲಲಿತಾ ಅವರ ಕುಟುಂಬಸ್ಥರನ್ನು ಸಂಪರ್ಕಿಸದೆ ಮನೆಯನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಆ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಿತು.

ಬಂಗಲೆಯನ್ನು ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ದೀಪಾ ಮತ್ತು ಅವರ ಸಹೋದರ ದೀಪಕ್ ಅರ್ಜಿ ಸಲ್ಲಿಸಿದ್ದರು. ಇದೀಗ ಮದ್ರಾಸ್ ಹೈಕೋರ್ಟ್ ತೀರ್ಪಿನ ಪ್ರಕಾರ ಜಯಲಲಿತಾ ಮನೆ ದೀಪಾ ಅವರಿಗೆ ಸಿಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ, ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಕಾಂಗ್ರೆಸ್, ಚಾಮುಂಡಿ ಬೆಟ್ಟವನ್ನು 'ಟೂಲ್‌ಕಿಟ್' ಆಗಿ ಬಳಸುತ್ತಿದೆ: ಆರ್ ಅಶೋಕ್

ಉಡುಪಿ: ನಾಪತ್ತೆಯಾಗಿದ್ದ ಬೆಂಗಳೂರು ಮಹಿಳೆಯ ಶವ ಸೌಪರ್ಣಿಕಾ ನದಿಯಲ್ಲಿ ಪತ್ತೆ!

'HAL ನಿರ್ಮಿತ ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ ಗಳು ಹಸ್ತಾಂತರಕ್ಕೆ ಸಿದ್ಧ': ರಕ್ಷಣಾ ಕಾರ್ಯದರ್ಶಿ

SCROLL FOR NEXT