ದೇಶ

ತಂದೆಯಂತೆ ವಾಯುಪಡೆ ಪೈಲಟ್ ಆಗಲು ಬಯಸಿದ ಮೃತ ಸೇನಾಧಿಕಾರಿ ಪುತ್ರಿ!

Nagaraja AB

ನವದೆಹಲಿ: ಇತ್ತೀಚಿಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಮತ್ತಿತರ 11 ಮಂದಿಯೊಂದಿಗೆ ಸಾವನ್ನಪ್ಪಿದ್ದ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌವ್ಹಾಣ್ ಅವರ 12 ವರ್ಷದ ಪುತ್ರಿ ಕೂಡಾ  ತನ್ನ ತಂದೆಯಂತೆ ವಾಯುಪಡೆ ಸೇರಿ ಪೈಲಟ್ ಆಗಲು ಬಯಸಿದ್ದಾಳೆ.

ಆಗ್ರಾದಲ್ಲಿನ ತಾಜ್ ಗಂಜ್ ಸಮಾಧಿಯಲ್ಲಿ ಕುಟುಂಬ ಸದಸ್ಯರು ಹಾಗೂ ಸಹೋದರ ಏಳು ವರ್ಷದ 7 ವರ್ಷದ ಅವಿರಾಜ್ ಜೊತೆಗೆ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಏಳನೇ ತರಗತಿ ವಿದ್ಯಾರ್ಥಿನಿ ಆರಾಧ್ಯ, ತಮ್ಮ ತಂದೆ ಹಿರೋ ಆಗಿರುವುದರಿಂದ ಅವರಂತೆ ಮುಂದೆ ತಾನೂ ಕೂಡಾ ಪೈಲಟ್ ಆಗುವುದಾಗಿ ಹೇಳಿದಳು.

ವಾಯುಪಡೆಯ ಅಧಿಕಾರಿಗಳು, ಆಗ್ರಾ ಜಿಲ್ಲಾಡಳಿತ, ಪೊಲೀಸರು ಮತ್ತಿತರರು ಅಗಲಿದ ವಿಂಗ್ ಕಮಾಂಡರ್ ಗೆ ಅಂತಿಮ ಗೌರವ ಸಲ್ಲಿಸಿದರು. ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವಂತೆ ನನ್ನ ತಂದೆ ಹೇಳುತ್ತಿದ್ದರು. ಅಧ್ಯಯನ ಕಡೆಗೆ ಗಮನ ಕೊಟ್ಟರೆ ಅಂಕಗಳು ಬರುವುದಾಗಿ ಅವರು ನಂಬಿದ್ದರು ಎಂದು ಆರಾಧ್ಯ ತಿಳಿಸಿದಳು. ಪೃಥ್ವಿ ಕುಟುಂಬ ಮಧ್ಯಪ್ರದೇಶದ ಗ್ವಾಲಿಯರ್ ನಿಂದ 2006ರಲ್ಲಿ ವಲಸೆ ಬಂದು, ಆಗ್ರಾದಲ್ಲಿ ನೆಲೆಸಿದೆ.  
 

SCROLL FOR NEXT