ದಿಗ್ವಿಜಯ್ ಸಿಂಗ್ 
ದೇಶ

ಹಾಸ್ಯ ಕಾರ್ಯಕ್ರಮಕ್ಕೆ ಕುನಾಲ್ ಕಮ್ರಾ, ಫಾರೂಕಿಯನ್ನು ಭೂಪಾಲ್ ಗೆ ಆಹ್ವಾನಿಸಿದ ದಿಗ್ವಿಜಯ್ ಸಿಂಗ್!

ಹಾಸ್ಯ ನಟರಾದ ಕುನಾಲ್ ಕಮ್ರಾ ಮತ್ತು ಮುನಾವರ್ ಫಾರೂಕಿ ಅವರ ಕಾರ್ಯಕ್ರಮಕ್ಕೆ ಬೆಂಗಳೂರು ಪೊಲೀಸರು ಇತ್ತೀಚಿಗೆ ತಡೆ ನೀಡಿದ ನಂತರ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಭೂಪಾಲ್ ನಲ್ಲಿ ಹಾಸ್ಯ ಕಾರ್ಯಕ್ರಮ ನೀಡಲು  ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆಹ್ವಾನಿಸಿದ್ದಾರೆ. 

ಭೂಪಾಲ್: ಹಾಸ್ಯ ನಟರಾದ ಕುನಾಲ್ ಕಮ್ರಾ ಮತ್ತು ಮುನಾವರ್ ಫಾರೂಕಿ ಅವರ ಕಾರ್ಯಕ್ರಮಕ್ಕೆ ಬೆಂಗಳೂರು ಪೊಲೀಸರು ಇತ್ತೀಚಿಗೆ ತಡೆ ನೀಡಿದ ನಂತರ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಭೂಪಾಲ್ ನಲ್ಲಿ ಹಾಸ್ಯ ಕಾರ್ಯಕ್ರಮ ನೀಡಲು  ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆಹ್ವಾನಿಸಿದ್ದಾರೆ. 

ಹಿಂದೂ ಬಲಪಂಥೀಯ ಸಂಘಟನೆಗಳ ಪ್ರತಿಭಟನೆಗಳ ನಡುವೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಲು ಫಾರೂಕಿಗೆ ಕಳೆದ ತಿಂಗಳು ಅವಕಾಶ ನಿರಾಕರಿಸಲಾಗಿತ್ತು. ಕೆಲವು ದಿನಗಳ ನಂತರ, ಸಂಘಟಕರಿಗೆ ಬೆದರಿಕೆ ಬಂದ ನಂತರ ಬೆಂಗಳೂರಿನಲ್ಲಿ ನಡೆಯಬೇಕಿದ್ದ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಕುನಾಲ್ ಕಮ್ರಾ ಹೇಳಿದ್ದರು. 

ಸೋಮವಾರ ಟ್ವೀಟ್ ವೊಂದನ್ನು ಮಾಡಿರುವ ದಿಗ್ವಿಜಯ್ ಸಿಂಗ್, ಕುನಾಲ್ ಮತ್ತು ಮುನಾವರ್ ಗಾಗಿ ಭೂಪಾಲ್ ನಲ್ಲಿ ಕಾರ್ಯಕ್ರಮ ಆಯೋಜಿಸುತ್ತೇನೆ. ಎಲ್ಲಾ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ. ಹಾಸ್ಯದ ವಿಷಯ ದಿಗ್ವಿಜಯ್ ಸಿಂಗ್ ಮಾತ್ರ ಆಗಿರಬೇಕು. ಆರ್ ಎಸ್ ಎಸ್ ಕಾರ್ಯಕರ್ತರನ್ನು ಇದರಲ್ಲಿ ಆಕ್ಷೇಪಿಸಬಾರದು. ಭಯಪಡಬೇಡಿ, ದಿನಾಂಕ ಮತ್ತು ಸಮಯ ಕೊಡಿ, ನಿಮ್ಮ ಎಲ್ಲಾ ಷರತ್ತುಗಳನ್ನು ಒಪ್ಪುವುದಾಗಿ ಹೇಳಿದ್ದಾರೆ. 

ಈ ಫೋಸ್ಟ್ ನಲ್ಲಿ ಕಮ್ರಾ ಅವರಿಗೆ ಸಂಬಂಧಿಸಿದ ನ್ಯೂಸ್ ಅರ್ಟಿಕಲ್ ವೊಂದನ್ನು ರಾಜ್ಯ ಸಭಾ ಸದಸ್ಯರು ಟ್ಯಾಗ್ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಜನವರಿಯಲ್ಲಿ ಬಿಜೆಪಿ ಶಾಸಕರ ಪುತ್ರ ನೀಡಿದ ದೂರಿನ ಮೇರೆಗೆ ಫಾರೂರಿ ಅವರು ಸಂಸದ ಇಂದೋರ್‌ನಲ್ಲಿ ಒಂದು ತಿಂಗಳು ಜೈಲಿನಲ್ಲಿ ಕಳೆದಿದ್ದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್