ದೇಶ

ಚಾರ್ ಧಾಮ್ ಯೋಜನೆ: ರಸ್ತೆ ಅಗಲೀಕರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

Sumana Upadhyaya

ನವದೆಹಲಿ: ಭದ್ರತೆಯ ದೃಷ್ಟಿಯಿಂದ ಚಾರ್‌ಧಾಮ್ ಯೋಜನೆಗಾಗಿ ರಸ್ತೆಗಳ ಡಬಲ್ ಲೇನ್(ದ್ವಿಪಥ) ರಸ್ತೆ ಅಗಲೀಕರಣ ವಿಸ್ತರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಅನುಮತಿ ನೀಡಿದೆ.

ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಮಾಜಿ ನ್ಯಾಯಮೂರ್ತಿ ಎ ಕೆ ಸಿಕ್ರಿ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ಸ್ಥಾಪಿಸಿದ್ದು, ಯೋಜನೆ ಬಗ್ಗೆ ನೇರವಾಗಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಮೇಲ್ವಿಚಾರಣಾ ಸಮಿತಿಗೆ ರಕ್ಷಣಾ ಸಚಿವಾಲಯ, ಸಾರಿಗೆ ಸಚಿವಾಲಯ, ಉತ್ತರಾಖಂಡ ಸರ್ಕಾರ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಂದ ಎಲ್ಲಾ ರೀತಿಯ ನೆರವು ಪಡೆಯಲಿದೆ. 

12 ಸಾವಿರ ಕೋಟಿ ಮೌಲ್ಯದ ಆಯಕಟ್ಟಿನ 900-ಕಿಮೀ ಉದ್ದದ ಚಾರ್‌ಧಾಮ್ ಯೋಜನೆಯು ಉತ್ತರಾಖಂಡದ ನಾಲ್ಕು ಪವಿತ್ರ ಪಟ್ಟಣಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ್‌ಗಳಿಗೆ ಎಲ್ಲಾ ಹವಾಮಾನ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಸೆಪ್ಟೆಂಬರ್ 8, 2020 ರ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಕೇಂದ್ರ ಸಲ್ಲಿಸಿದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಮಹತ್ವಾಕಾಂಕ್ಷೆಯ ಚಾರ್ ಧಾಮ್ ಹೆದ್ದಾರಿ ಯೋಜನೆಯಲ್ಲಿ 5.5 ಮೀಟರ್ ಅಗಲದ ಕ್ಯಾರೇಜ್‌ವೇ ಅಗಲವನ್ನು 2018 ರ ಸುತ್ತೋಲೆಯನ್ನು ಅನುಸರಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವನ್ನು (MoRTH) ಕೇಳಿದೆ.

ರಿಷಿಕೇಶದಿಂದ ಮನ, ಋಷಿಕೇಶದಿಂದ ಗಂಗೋತ್ರಿ ಮತ್ತು ತನಕ್‌ಪುರದಿಂದ ಪಿಥೋರಗಢದವರೆಗಿನ ರಾಷ್ಟ್ರೀಯ ಹೆದ್ದಾರಿಗಳನ್ನು ದ್ವಿಪಥ ಸಂರಚನೆಗೆ ಅಭಿವೃದ್ಧಿಪಡಿಸುವ ಆದೇಶ ಮತ್ತು ನಿರ್ದೇಶನಗಳನ್ನು ಮಾರ್ಪಾಡು ಮಾಡಲು ಕೋರುವುದಾಗಿ ರಕ್ಷಣಾ ಸಚಿವಾಲಯ ತನ್ನ ಅರ್ಜಿಯಲ್ಲಿ ಹೇಳಿತ್ತು.

ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಭದ್ರತೆಗೆ ಗಂಭೀರ ಸವಾಲುಗಳು ಎದುರಾಗುತ್ತಿದ್ದು, ಗಡಿ ಭದ್ರತಾ ಕಾಳಜಿಗಳನ್ನು ಪೂರೈಸುವ ಅಗತ್ಯವಿದೆ. ಸೈನ್ಯ ಮತ್ತು ಸಲಕರಣೆಗಳ ಬಳಕೆಯ ಅಗತ್ಯವಿದೆ. ರಕ್ಷಣಾ ಸಚಿವಾಲಯವು ವಿಶೇಷ ಸಂಸ್ಥೆಯಾಗಿದ್ದು, ಅದರ ಕಾರ್ಯಾಚರಣೆಯ ಅವಶ್ಯಕತೆಯನ್ನು ಬಳಸಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

"ಗಡಿಗಳನ್ನು ರಕ್ಷಿಸಲು ಸಶಸ್ತ್ರ ಪಡೆಗಳ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಬೇಕು, ಇತರ ಗುಡ್ಡಗಾಡು ಪ್ರದೇಶಗಳಲ್ಲಿರುವಂತೆ ಮತ್ತು ಆಯಕಟ್ಟಿನ ಪ್ರಾಮುಖ್ಯತೆ ಹೊಂದಿರುವ ಹೆದ್ದಾರಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

SCROLL FOR NEXT