ದೇಶ

ಯುಪಿ ಚುನಾವಣೆಗೆ ತಯಾರಿ: ರಾಜ್ಯದ 40 ಸಂಸದರನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ

Srinivas Rao BV

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ತಯಾರಿ ನಡೆಸುತ್ತಿದ್ದು, ಇದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ 40 ಸಂಸದರನ್ನು ಭೇಟಿ ಮಾಡಲಿದ್ದಾರೆ. 

ತಮ್ಮ ಅಧಿಕೃತ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸದರನ್ನು ಉಪಹಾರ ಕೂಟದಲ್ಲಿ ಭೇಟಿ ಮಾಡಲಿದ್ದು, ಈ ವರೆಗೂ ಎಲ್ಲಾ ದಕ್ಷಿಣ ಭಾರತದ ಸಂಸದರು, ಈಶಾನ್ಯ ರಾಜ್ಯಗಳ ಸಂಸದರು, ಮಧ್ಯಪ್ರದೇಶದ ಸಂಸದರನ್ನು ಮೋದಿ ಭೇಟಿಯಾಗಿದ್ದಾರೆ. 

ಈ ಸಭೆಗೆ ಯಾವುದೇ ಅಜೆಂಡಾ ಇಲ್ಲ. ಸಭೆಯಲ್ಲಿ ಪಕ್ಷದ ಸಂಸದರಿಗೆ ಜನರೊಂದಿಗೆ ಹೆಚ್ಚು ಸಂವಹನ ನಡೆಸುವಂತೆ ಸೂಚಿಸಿದ್ದು, ವಿಐಪಿ ಸಂಸ್ಕೃತಿಯನ್ನು ಬದಿಗಿರಿಸಿ ರಾಜಕೀಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವಂತೆ ಈ ವರೆಗಿನ ಸಭೆಗಳಲ್ಲಿ ಸಂಸದರಿಗೆ ಸೂಚಿಸಿದ್ದಾರೆ.

SCROLL FOR NEXT