ದೇಶ

ಪೋಕ್ಸೋ ಪ್ರಕರಣದ ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಿಗೆ ಖಾಯಂ ಜಡ್ಜ್ ಸ್ಥಾನ ನೀಡಲು ಸುಪ್ರೀಂ ನಕಾರ

Srinivas Rao BV

ನವದೆಹಲಿ: ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ ನ್ಯಾಯಾಧೀಶರಾಗಿದ್ದ ಪುಷ್ಪ ಗನೇದಿವಾಲ ಅವರಿಗೆ ಖಾಯಂ ನ್ಯಾಯಾಧೀಶರ ಸ್ಥಾನ ನೀಡಲು ಸುಪ್ರೀಂ ಕೋರ್ಟ್ ನ ಕೊಲಿಜಿಯಂ ನಿರಾಕರಿಸಿದೆ. 

ಈ ಬೆಳವಣಿಗೆಯನ್ನು ನ್ಯಾಯಾಧೀಶರಿಗೆ ಉಂಟಾದ ಹಿಂಬಡ್ತಿ ಎಂದು ವಿಶ್ಲೇಷಿಸಲಾಗುತ್ತಿದೆ. ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಅಪರಾಧ ಪ್ರಕರಣ ದಾಖಲಾಗಲು ಸ್ಪರ್ಶ (skin-to-skin)ವು ಕಾರಣವಾಗುತ್ತದೆ ಎಂದು ಪುಷ್ಪ ಗನೇದಿವಾಲ ನೀಡಿದ್ದ ತೀರ್ಪನ್ನು   ನ.18 ರಂದು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು. 

ಪುರುಷ ತನ್ನ ಬಟ್ಟೆಯನ್ನು ತೆಗೆಯದೆ ಮಗುವನ್ನು ಹಿಡಿದಿದ್ದರಿಂದ, ಈ ಅಪರಾಧವನ್ನು ಲೈಂಗಿಕ ದೌರ್ಜನ್ಯ ಎಂದು ಕರೆಯಲಾಗುವುದಿಲ್ಲ. ಆದರೆ ಇದು ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಅಪರಾಧವಾಗಿದೆ ಎಂದು ನ್ಯಾಯಮೂರ್ತಿ ಪುಷ್ಪಾ ಗಣೆಡಿವಾಲಾ ಹೇಳಿದ್ದರು.

2016 ರಲ್ಲಿ 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 39 ವರ್ಷದ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಮಾರ್ಪಡಿಸಿತ್ತು. ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠದ ನ್ಯಾಯಾಧೀಶರ ಈ ತೀರ್ಪಿಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ನ್ಯಾ.ಪುಷ್ಪ ಗನೇದಿವಾಲ ಅವರ ಹೆಸರನ್ನು ಹೊರತುಪಡಿಸಿ ಇನ್ನು ಉಳಿದ 3 ಹೆಸರುಗಳನ್ನು ಖಾಯಂ ಜಡ್ಜ್ ಸ್ಥಾನಕ್ಕೆ ಅನುಮೋದನೆ ನೀಡಿದೆ.

SCROLL FOR NEXT