ದೇಶ

ಕೋತಿ ಮರಿ ಕೊಂದಿದ್ದಕ್ಕೆ ಪ್ರತಿಕಾರ: 250 ನಾಯಿ ಮರಿಗಳನ್ನು ಕೊಂದ ಕೋತಿಗಳು!

Vishwanath S

ನವದೆಹಲಿ: ಮಹಾರಾಷ್ಟ್ರದ ಬೀಡ್‌ನಿಂದ ನಾಯಿ ಮತ್ತು ಕೋತಿಗಳ ನಡುವೆ ರಕ್ತಸಿಕ್ತ ಯುದ್ಧ ನಡೆಯುತ್ತಿದೆ. ಕೋತಿ ಮರಿಯನ್ನು ನಾಯಿಗಳು ಕೊಂದಿದ್ದರಿಂದ ಇದಕ್ಕೆ ಪ್ರತಿಕಾರವಾಗಿ ಬರೋಬ್ಬರಿ 250 ನಾಯಿಮರಿಗಳನ್ನು ಕೋತಿಗಳು ಕೊಂದಿವೆ.

ಈ ಘಟನೆ ಬೀಡ್ ಜಿಲ್ಲೆಯ ಮಜಲಗಾಂವ್‌ನಲ್ಲಿ ನಡೆದಿದ್ದು, ಒಂದು ತಿಂಗಳ ಹಿಂದೆ ನಾಯಿಗಳ ಹಿಂಡು ಕೋತಿ ಮರಿಯನ್ನು ನಿರ್ದಯವಾಗಿ ಕೊಂದಿತ್ತು. ಇದರಿಂದ ಆಕ್ರೋಶಗೊಂಡ ಮಂಗಗಳು ಅಲ್ಲಿನ ನಾಯಿಮರಿಗಳನ್ನು ಕೊಲ್ಲುತ್ತಾ ಬಂದಿವೆ.

ಮಂಗಗಳು ನಾಯಿ ಮರಿಗಳನ್ನು ಎತ್ತರದ ಕಟ್ಟಡದ ಮೇಲೆ ಹೊತ್ತೊಯ್ದು ಅಲ್ಲಿಂದ ಕೆಳಗೆ ಎಸೆಯುತ್ತಿದ್ದು ಕೆಳಗೆ ಬಿದ್ದ ನಾಯಿಮರಿಗಳು ಮೃತಪಟ್ಟಿದ್ದಾವೆ.

ಮಂಗಗಳು ಮನುಷ್ಯರ ಮೇಲೂ ದಾಳಿ ಮಾಡತೊಡಗಿದವು
ಅಲ್ಲಿದ್ದವರು ಈ ನಾಯಿಗಳನ್ನು ರಕ್ಷಿಸಲು ಮುಂದಾದಾಗ ಮಂಗಗಳು ಮನುಷ್ಯರ ಮೇಲೂ ದಾಳಿ ಮಾಡತೊಡಗಿವೆ. ಮನುಷ್ಯರ ಮಕ್ಕಳು ಮಂಗಗಳ ದಾಳಿಗೆ ಬಲಿಯಾಗುತ್ತಿದ್ದಾರೆ. ಲಾವೂಲ್ ಗ್ರಾಮವು ಮಜಲಗಾಂವ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಸುಮಾರು 5 ಸಾವಿರ ಜನಸಂಖ್ಯೆಯ ಈ ಗ್ರಾಮದಲ್ಲಿ ಈಗ ನಾಯಿಮರಿಗಳು ಕಾಣುತ್ತಿಲ್ಲ.

SCROLL FOR NEXT