ದೇಶ

ಶಿವಾಜಿ ಪ್ರತಿಮೆ ವಿರೂಪ; ಆರೋಪಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಗೃಹ ಸಚಿವ ಅಮಿತ್ ಶಾ ಗೆ ಶಿವಸೇನೆ ಸದಸ್ಯರ ಮನವಿ 

Srinivas Rao BV

ಪುಣೆ: ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ವಿರೂಪಗೊಳಿಸಿದ ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಶಿವಸೇನೆ ನಾಯಕರು ಆಗ್ರಹಿಸಿದ್ದಾರೆ. 

ಡಿ.20 ರಂದು ಪುಣೆಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಶಿವಸೇನೆ ಮುಖಂಡರು ಈ ಮನವಿ ಸಲ್ಲಿಸಿದ್ದಾರೆ. ಶಿವಸೇನೆಯ ನಗರ ಅಧ್ಯಕ್ಷ ಸಂಜಯ್ ಮೋರೆ ಅಮಿತ್ ಶಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು, 

ಇನ್ನು ಇಂತಹ ಸಣ್ಣ ಘಟನೆಳಿಗೆ ಹೆಚ್ಚಿನ ಮಹತ್ವ ನೀಡಬಾರದು, ದೊಡ್ಡದು ಮಾಡಬಾರದು, ಗಂಭೀರವಾಗಿ ಪರಿಗಣಿಸಬಾರದು ಎಂಬ ಅರ್ಥದ ಸಿಎಂ ಬೊಮ್ಮಾಯಿ ಅವರ ಹೇಳಿಕೆಗೂ ಪುಣೆಯ ಶಿವಸೇನೆ ನಾಯಕರು ಪ್ರತಿಕ್ರಿಯೆ ನೀಡಿದ್ದು, ಸಿಎಂ ಬೊಮ್ಮಾಯಿ ಅವರಿಗೆ ತಮ್ಮ ಹೇಳಿಕೆಯನ್ನು ನಿಯಂತ್ರಿಸಲು ಆಗ್ರಹಿಸಿದ್ದಾರೆ. 

ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆ ನೆರವೇರಿಸಲು ಪುಣೆಗೆ ಗೃಹ ಸಚಿವ ಅಮಿತ್ ಶಾ ಆಗಮಿಸುವುದಕ್ಕೂ ಮುನ್ನ ನೆರೆ ರಾಜ್ಯದಲ್ಲಿ ಇಂಥಹ ಘಟನೆ ನಡೆದಿರುವುದು ಖಂಡನೀಯ ಹಾಗೂ ವಿಪರ್ಯಾಸ ಎಂದು ಶಿವಸೇನೆ ಹೇಳಿದೆ. 

ಇನ್ನು ಬೆಳಗಾವಿಯಲ್ಲಿ ಹಾಗೂ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿ ಅನಾಗರಿಕರಾಗಿ ವರ್ತಿಸಿರುವ ಎಂಇಎಸ್ ನ ಪುಂಡರ ವಿರುದ್ಧವೂ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

SCROLL FOR NEXT