ದೇಶ

ಮಹಾರಾಷ್ಟ್ರದಲ್ಲಿ 11 ಹೊಸ ಓಮಿಕ್ರಾನ್ ಸೋಂಕು ಪತ್ತೆ; ಸಂಖ್ಯೆ 65ಕ್ಕೆ ಏರಿಕೆ; ಮುಂಬೈ ನಲ್ಲಿ ಕಠಿಣ ನಿರ್ಬಂಧ ಜಾರಿ

Srinivas Rao BV

ಮುಂಬೈ: ಮಹಾರಾಷ್ಟ್ರದಲ್ಲಿ ಡಿ.21 ರಂದು ಓಮಿಕ್ರಾನ್ ನ 11 ಹೊಸ ಪ್ರಕರಣಗಳು ವರದಿಯಾಗಿದ್ದು,  ಒಟ್ಟು ಸಂಖ್ಯೆ 65 ಕ್ಕೆ ಏರಿಕೆಯಾಗಿದೆ. 

ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ವರದಿಯ ಪ್ರಕಾರ ರಾಜ್ಯದಲ್ಲಿ ಇನ್ನೂ 11 ಮಂದಿಗೆ ಕೋವಿಡ್-19 ನ ಓಮಿಕ್ರಾನ್ ರೂಪಾಂತರಿ ಸೋಂಕು ತಗುಲಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

8 ಪ್ರಕರಣಗಳು ಮುಂಬೈ ನ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ನಡೆಯಬೇಕಾದರೆ ವರದಿಯಾಗಿದ್ದು, ನವಿಮುಂಬೈ ನಲ್ಲಿ ಹಾಗೂ ಪಿಂಪ್ರಿ ಚಿಂಚ್ವಾಡ್, ಒಸ್ಮಾನಾಬಾದ್ ನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಓಮಿಕ್ರಾನ್ ಹೆಚ್ಚುತ್ತಿರುವ ಭೀತಿಯ ಹಿನ್ನೆಲೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) 200 ಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸುವ ಯಾವುದೇ ಕಾರ್ಯಕ್ರಮಕ್ಕೆ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸಿದೆ. 

ಸ್ಥಳೀಯ ಆಡಳಿತ ಓಮಿಕ್ರಾನ್ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಾರ್ಯಕ್ರಮಗಳಲ್ಲಿ, ಸಮಾರಂಭಗಳಲ್ಲಿ ಕೋವಿಡ್-19 ಸಂಬಂಧಿತ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯೇ ಎಂಬುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕೆಂದು ಸ್ಥಳೀಯ ವಾರ್ಡ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. 
 

SCROLL FOR NEXT