ಪಂಜಾಬ್ ನ ಅಮೃತಸರ ಮತ್ತು ದೆಹಲಿಯಲ್ಲಿ ಇಂದು ಕಂಡುಬಂದಿದ್ದು ಹೀಗೆ 
ದೇಶ

ರಾಜಧಾನಿ ದೆಹಲಿ ಚಳಿಗೆ ತತ್ತರ, 4 ಡಿಗ್ರಿ ಸೆ. ತಾಪಮಾನ ದಾಖಲು, ಪಂಜಾಬ್ ನ ಅಮೃತಸರದಲ್ಲಿ ತೀವ್ರ ಶೀತಗಾಳಿ

ರಾಜಧಾನಿ ದೆಹಲಿ ಚಳಿಯಿಂದ ನಲುಗಿ ಹೋಗಿದೆ. ಇಂದು ಮಂಗಳವಾರ ಬೆಳಗ್ಗೆ 8.30ಕ್ಕೆ ದೆಹಲಿಯ ಸಫ್ದರ್ಜಂಗ್ ಪ್ರದೇಶದಲ್ಲಿ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನವದೆಹಲಿ: ರಾಜಧಾನಿ ದೆಹಲಿ ಚಳಿಯಿಂದ ನಲುಗಿ ಹೋಗಿದೆ. ಇಂದು ಮಂಗಳವಾರ ಬೆಳಗ್ಗೆ 8.30ಕ್ಕೆ ದೆಹಲಿಯ ಸಫ್ದರ್ಜಂಗ್ ಪ್ರದೇಶದಲ್ಲಿ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಇದೇ ರೀತಿಯ ಹವಾಮಾನವಿದೆ. ಜನರು ಚಳಿಯಲ್ಲಿ ಗಡಗಡ ನಡುಗುವಂತೆ ಮಾಡಿದೆ. ಇಂದು ನಸುಕಿನ ಜಾವ ದೆಹಲಿಯಲ್ಲಿ ಜನರು ತೀವ್ರ ಚಳಿಗೆ ಬೀದಿಬದಿ ಅಂಗಡಿ ಪಕ್ಕ ಬೆಂಕಿಯನ್ನು ಹೊತ್ತಿಸಿ ಚಳಿ ಕಾಯಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ತೀವ್ರ ಚಳಿಗೆ ಬಿಸಿಬಿಸಿ ಟೀ ಸೇವಿಸುತ್ತಿರುವುದು ಕಂಡುಬಂತು. ದಪ್ಪ ದಪ್ಪ ರಗ್ಗು ಹೊದ್ದುಕೊಂಡು ಜನರು ಓಡಾಡುತ್ತಿರುವುದು ಸಾಮಾನ್ಯವಾಗಿತ್ತು. ರಾಷ್ಟ್ರ ರಾಜಧಾನಿಗೆ ಹಳದಿ ಅಲರ್ಟ್ ನೀಡಲಾಗಿದೆ.

ತಾಪಮಾನ ಕುಸಿತ ಕಂಡ ಪರಿಣಾಮ ಮಂಜು ಮುಸುಕಿದ ವಾತಾವರಣ ದೆಹಲಿ ಜನರನ್ನು ಕಾಡಿದೆ. ಉತ್ತರ ಭಾರತದಾದ್ಯಂತ ಶೀತಗಾಳಿಯು ತನ್ನ ಹಿಡಿತವನ್ನು ಬಿಗಿಗೊಳಿಸಿದ್ದು, ಈ ಪ್ರದೇಶದ ಹಲವಾರು ಭಾಗಗಳಲ್ಲಿ ತಾಪಮಾನವು ಹಿಮಭರಿತ ಗಾಳಿಯಿಂದಾಗಿ ಕುಸಿದಿದೆ. 

ವಾಯುವ್ಯ ಭಾರತವು ಮುಂದಿನ ವಾರದಲ್ಲಿ ಶೀತ ಅಲೆಯಂತಹ ಪರಿಸ್ಥಿತಿಗಳಿಗೆ ಸಾಕ್ಷಿಯಾಗಲಿದೆ.ಇದೇ ರೀತಿಯ ವಾತಾವರಣ ಇನ್ನು ಕೆಲವು ದಿನಗಳವರೆಗೆ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ. ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಹಿಮಪಾತವು ಬಯಲು ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ.

ದೆಹಲಿಯಲ್ಲಿ ಕೆಟ್ಟ ಹವಾಮಾನ: ದೆಹಲಿಯಲ್ಲಿ ಪ್ರಸ್ತುತ ವಾಯು ಗುಣಮಟ್ಟ ಅತಿ ಕಳಪೆ ಮಟ್ಟಕ್ಕೆ ಇಳಿದಿದ್ದು ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 316ರಲ್ಲಿದೆ ಎಂದು SAFAR-India ತಿಳಿಸಿದೆ. ಮುಂಬೈ ಮತ್ತು ಪುಣೆ ನಗರಗಳ ವಾಯು ಗುಣಮಟ್ಟ ಕಳಪೆ ಮಟ್ಟದಲ್ಲಿದೆ. 

ಪಂಜಾಬ್ ರಾಜ್ಯದಲ್ಲಿ ಕೂಡ ತೀವ್ರ ಚಳಿಯಿದ್ದು,ಅಮೃತಸರದಲ್ಲಿ ದಟ್ಟ ಮಂಜು ಕವಿದಿರುವುದು ಮಾತ್ರವಲ್ಲದೆ ಶೀತಗಾಳಿ ಹಬ್ಬಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT