ದೇಶ

ಓಮಿಕ್ರಾನ್ ಭೀತಿ: ಸಾರ್ವಜನಿಕ ಸಭೆಗಳನ್ನು ನಿಲ್ಲಿಸಿ, ಚುನಾವಣೆ ಮುಂದೂಡಲು ಕೇಂದ್ರಕ್ಕೆ 'ಹೈ' ಸಲಹೆ

Srinivas Rao BV

ಪ್ರಯಾಗ್ ರಾಜ್: ದೇಶಾದ್ಯಂತ ಓಮಿಕ್ರಾನ್ ಭೀತಿ ಎದುರಾಗಿದ್ದು ಸಾರ್ವಜನಿಕ ಸಭೆಗಳನ್ನು ನಿಲ್ಲಿಸಿ ಚುನಾವಣೆ ಮುಂದೂಡಲು ಕೇಂದ್ರ ಸರ್ಕಾರಕ್ಕೆ ಅಲ್ಲಹಾಬಾದ್  ಹೈಕೋರ್ಟ್ ಸಲಹೆ ನೀಡಿದೆ. 

ಓಮಿಕ್ರಾನ್ ಹೆಚ್ಚಳವಾಗುತ್ತಿರುವುದರಿಂದ ಚುನಾವಣೆಗೆ ಸಜ್ಜುಗೊಂಡಿರುವ ರಾಜ್ಯಗಳಲ್ಲಿ ಈ ಕ್ರಮ ಕೈಗೊಳ್ಳಲು ಹೈಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿದೆ. 

ನ್ಯಾ. ಶೇಖರ್ ಕುಮಾರ್ ಯಾದವ್ ಅವರಿದ್ದ ಪೀಠ, ಅರ್ಜಿಯೊಂದರ ವಿಚಾರಣೆ ನಡೆಸಿದ್ದು, "ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ ಹಾಗೂ ಮೂರನೆ ಅಲೆಯ ಸಾಧ್ಯತೆ ಇದೆ." ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಚೀನಾ, ನೆದರ್ಲ್ಯಾಂಡ್, ಜರ್ಮನಿಯಂತಹ ರಾಷ್ಟ್ರಗಳು ಸಂಪೂರ್ಣ ಲಾಕ್ ಡೌನ್ ಮೊರೆ ಹೋಗಿವೆ. 

ಎರಡನೇ ಅಲೆಯಲ್ಲಿ ದೇಶದಲ್ಲಿ ಲಕ್ಷಾಂತರ ಮಂದಿಗೆ ಸೋಂಕು ತಗುಲಿತ್ತು ಹಾಗೂ ಮಂದಿ ಸಾವನ್ನಪ್ಪಿದ್ದರು" ಎಂದು ಹೈಕೋರ್ಟ್ ಹೇಳಿದೆ. ಉತ್ತರ ಪ್ರದೇಶದಲ್ಲಿ ನಡೆದ ಗ್ರಾಮಪಂಚಾಯ್ತಿ ಚುನಾವಣೆ ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯೂ ಹೆಚ್ಚಿದ ಪ್ರಕರಣಗಳಿಗೆ ಕೊಡುಗೆ ನೀಡಿತ್ತು 

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸನಿಹದಲ್ಲಿದ್ದು ರಾಜಕೀಯ ಪಕ್ಷಗಳು ಲಕ್ಷಾಂತರ ಮಂದಿಯನ್ನು ಸಾರ್ವಜನಿಕ ಸಮಾರಂಭದಲ್ಲಿ ಜನರನ್ನು ಕರೆತರುತ್ತಿದೆ. ಅಲ್ಲಿ ಕೋವಿಡ್-19 ನಿಯಮಗಳ ಪಾಲನೆ ಅಸಾಧ್ಯ ಎಂದು ಹೈಕೋರ್ಟ್ ಹೇಳಿದೆ.

ಈ ರೀತಿಯ ಸಾರ್ವಜನಿಕ ಸಭೆಗಳನ್ನು ತಡೆಯದೇ ಇದ್ದಲ್ಲಿ ಪರಿಸ್ಥಿತಿ ಇನ್ನೂ ಹದಗೆಡುತ್ತದೆ ಎಂದು ಹೈಕೋರ್ಟ್ ಎಚ್ಚರಿಸಿದ್ದು ಚುನಾವಣಾ ಆಯೋಗಕ್ಕೆ ಇಂತಹ ಸಭೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಸಲಹೆ ನೀಡಿದೆ.

SCROLL FOR NEXT