ವೆಂಕಟೇಶ್ವರ ಸ್ವಾಮಿ (ಸಂಗ್ರಹ ಚಿತ್ರ) 
ದೇಶ

ದಾಖಲೆ ಬರೆದ ತಿಮ್ಮಪ್ಪ: ಕೇವಲ 80 ನಿಮಿಷಗಳಲ್ಲಿ 4.6ಲಕ್ಷ ದರ್ಶನ ಟಿಕೆಟ್ ಗಳು ಬುಕ್!!

ಖ್ಯಾತ ಪವಿತ್ರ ಯಾತ್ರಾತಾಣ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲದ ಆನ್ ಲೈನ್ ದರ್ಶನ ಟಿಕೆಟ್ ಗಳು ದಾಖಲೆ ಸಮಯದಲ್ಲಿ ಬುಕ್ ಆಗಿವೆ.

ಅಮರಾವತಿ: ಖ್ಯಾತ ಪವಿತ್ರ ಯಾತ್ರಾತಾಣ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲದ ಆನ್ ಲೈನ್ ದರ್ಶನ ಟಿಕೆಟ್ ಗಳು ದಾಖಲೆ ಸಮಯದಲ್ಲಿ ಬುಕ್ ಆಗಿವೆ.

ಹೌದು.. ಜನವರಿ ತಿಂಗಳ ಸುಮಾರು 4.6ಲಕ್ಷ ದರ್ಶನ ಟಿಕೆಟ್ ಗಳು ಕೇವಲ 80 ನಿಮಿಷದಲ್ಲೇ ಬುಕ್ ಆಗುವ ಮೂಲಕ ದಾಖಲೆ ನಿರ್ಮಾಣವಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದ ಶ್ರೀವೆಂಕಟೇಶ್ವರ ಸ್ವಾಮಿಯ ವಿಶೇಷ ದರ್ಶನದ ಟಿಕೆಟ್‌ಗಳು ಕೇವಲ 80 ನಿಮಿಷಗಳಲ್ಲಿ ಖಾಲಿ ಆಗಿದೆ.

ಜನವರಿ ತಿಂಗಳಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸುವವರಿಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆನ್‌ಲೈನ್‌ನಲ್ಲಿ ವಿಶೇಷ ದರ್ಶನದ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದ್ದು, ಇವು ಕೇವಲ 80 ನಿಮಿಷದಲ್ಲಿ ಟಿಕೆಟ್‌ಗಳು ಬುಕ್ ಆಗಿವೆ.

ವಿಶೇಷ ದರ್ಶನಕ್ಕಾಗಿ ಒಂದು ಟಿಕೆಟ್‌ನ ಬೆಲೆ 300 ರೂಪಾಯಿ ಇದ್ದು, ಸುಮಾರು 4 ಲಕ್ಷದ 60 ಸಾವಿರ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಜನವರಿಯಲ್ಲಿ ವೈಕುಂಠ ಏಕಾದಶಿಯ ಕಾರಣದಿಂದಾಗಿ ಹೆಚ್ಚಿನ ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಸರ್ವದರ್ಶನಂ ಟಿಕೆಟ್‌ಗಳನ್ನು ಇದೇ ತಿಂಗಳ 31ರಂದು ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ತಿರುಮಲದಲ್ಲಿ ವಸತಿ ಸೌಕರ್ಯದ ಮಾಹಿತಿಯನ್ನು ಇದೇ ತಿಂಗಳ 27ನೇ ತಾರೀಕಿನಂದು ಬೆಳಗ್ಗೆ 9 ಗಂಟೆಗೆ ಟಿಟಿಡಿ ಪ್ರಕಟ ಮಾಡಲಿದೆ. ಜನವರಿ 11ರಿಂದ 14ರವರೆಗೆ ವಸತಿಗಾಗಿ ಬುಕ್ ಮಾಡಬಹುದಾಗಿದೆ. ಇದಕ್ಕೆ ಟಿಕೆಟ್ ಕೊಳ್ಳುವ ವೇಳೆಯೇ ವಸತಿಗಾಗಿ ಮುಂಗಡವಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದಾಗಿದೆ.

ಟಿಕೆಟ್ ಬುಕ್ ಮಾಡುವ ವೇಳೆಯೇ ಸಮಯ ಮತ್ತು ದಿನಾಂಕವನ್ನು ನೀಡಲಾಗುತ್ತದೆ. ನಿಗದಿಪಡಿಸಿದ ಸಮಯದಲ್ಲೇ ಭಕ್ತರು ಶ್ರೀವೆಂಕಟೇಶ್ವರನ ದರ್ಶನ ಪಡೆಯಬಹುದಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್