ಓಮಿಕ್ರಾನ್ (ಸಾಂಕೇತಿಕ ಚಿತ್ರ) 
ದೇಶ

ಓಮಿಕ್ರಾನ್ ಹೆಚ್ಚಳ: ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಕೇಂದ್ರ ತಂಡ ನಿಯೋಜನೆ

ದೇಶದ ಹಲವು ಪ್ರದೇಶಗಳಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಳದ ಆತಂಕ ಕಾಡುತ್ತಿದ್ದು, ಕೇಂದ್ರ ತಂಡಗಳನ್ನು 10 ರಾಜ್ಯಗಳಲ್ಲಿ ನಿಯೋಜನೆ ಮಾಡುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ನವದೆಹಲಿ: ದೇಶದ ಹಲವು ಪ್ರದೇಶಗಳಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಳದ ಆತಂಕ ಕಾಡುತ್ತಿದ್ದು, ಕೇಂದ್ರ ತಂಡಗಳನ್ನು 10 ರಾಜ್ಯಗಳಲ್ಲಿ ನಿಯೋಜನೆ ಮಾಡುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 

ಲಸಿಕೆ ನೀಡುತ್ತಿರುವುದರಲ್ಲಿ ಕಡಿಮೆ ವೇಗ ಇರುವ ರಾಜ್ಯಗಳು, ಕೋವಿಡ್-19 ಸೋಂಕು ಅಥವಾ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಸೋಂಕು ಪ್ರಕರಣಗಳು ಹೆಚ್ಚಿರುವ 10 ರಾಜ್ಯಗಳನ್ನು ಪಟ್ಟಿ ಮಾಡಲಾಗಿದ್ದು, ಕೇಂದ್ರ ತಂಡವನ್ನು ನಿಯೋಜಿಸಲಾಗುತ್ತಿದೆ. 

ತಮಿಳುನಾಡು, ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಪಂಜಾಬ್, ಮಹಾರಾಷ್ಟ, ಕೇರಳ, ಮಿಜೊರಾಮ್ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈ ತಂಡ ನಿಯೋಜನೆಗೊಂಡು ಪರಿಸ್ಥಿತಿ ಸುಧಾರಣೆಗೆ ಸ್ಥಳೀಯ ಆರೋಗ್ಯ ಇಲಾಖೆ, ಆಡಳಿತದೊಂದಿಗೆ ಕಾರ್ಯನಿರ್ವಹಣೆ ಮಾಡಲಿದೆ. 

ಸೋಂಕು ಹರಡುವಿಕೆಯ ಪತ್ತೆ, ನಿಗಾ ವಹಿಸುವುದು, ಕಂಟೈನ್ಮೆಂಟ್ ಕಾರ್ಯಾಚರಣೆಗಳು ಹಾಗೂ ಕೋವಿಡ್-19 ಟೆಸ್ಟಿಂಗ್ ಐಎನ್ಎಸ್ಎಸಿಒಜಿ ನೆಟ್ವರ್ಕ್ ಗೆ ಜಿನೋಮ್ ಸೀಕ್ವೆನ್ಸಿಂಗ್ ಗಾಗಿ ಸ್ಯಾಂಪಲ್ ಗಳನ್ನು ಕಳಿಸುವುದು ಮುಂತಾದ ಪ್ರಮುಖ ವಿಷಯಗಳತ್ತ ಈ ಕೇಂದ್ರ ತಂಡ ವಿಶೇಷ ಗಮನ ಹರಿಸಲಿದೆ. 

ಕೋವಿಡ್-19 ತಡೆಗೆ ಸೂಕ್ತ ನಡವಳಿಕೆ ಜಾರಿಗೆ ತರುವುದು, ಆಸ್ಪತ್ರೆಗಳಲ್ಲಿ ಬೆಡ್ ಗಳ ಲಭ್ಯತೆ, ಆಂಬುಲೆನ್ಸ್, ವೆಂಟಿಲೇಟರ್, ವೈದ್ಯಕೀಯ ಆಕ್ಸಿಜನ್, ಕೋವಿಡ್-19 ಲಸಿಕೆ ಪ್ರಗತಿ ವಿಷಯಗಳಿಗೂ ಈ ಕೇಂದ್ರ ತಂಡವೇ ಹೊಣೆಯಾಗಿರಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT