ದೇಶ

ಜಾರ್ಖಂಡ್‌ನಲ್ಲಿ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಬೆಲೆ ಲೀಟರ್‌ಗೆ 25 ರೂ. ಇಳಿಕೆ

Lingaraj Badiger

ರಾಂಚಿ: ಜಾರ್ಖಂಡ್ ದ್ವಿಚಕ್ರ ವಾಹನ ಸವಾರರಿಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಬಂಪರ್ ಕೊಡುಗೆ ನೀಡಿದ್ದು, ಪೆಟ್ರೋಲ್ ಬೆಲೆ ಲೀಟರ್ ಗೆ ಬರೋಬ್ಬರಿ 25 ರೂಪಾಯಿ ಇಳಿಕೆ ಮಾಡಿದ್ದಾರೆ.

ರಾಜ್ಯ ಸರ್ಕಾರ ಬುಧವಾರ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಿನ ರಿಯಾಯಿತಿ ಘೋಷಿಸಿದೆ. ಆದರೆ ಇದು ದ್ವಿಚಕ್ರ ವಾಹನಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದೆ.

"ಜಾರ್ಖಂಡ್ ಸರ್ಕಾರವು ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಸವಾರರಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 25 ರೂಪಾಯಿ ರಿಯಾಯಿತಿ ನೀಡಲು ನಿರ್ಧರಿಸಿದೆ" ಎಂದು ಸಿಎಂ ಸೊರೆನ್ ಅವರು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.

ಮುಂದಿನ ವರ್ಷ ಜನವರಿ 26 ರಿಂದ ಹೊಸ ದರಗಳು ಜಾರಿಗೆ ಬರಲಿವೆ ಎಂದು ಸೊರೆನ್ ಹೇಳಿದ್ದಾರೆ.

ಸೊರೆನ್ ಸರ್ಕಾರ ಇಂದಿಗೆ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಿದ್ದಾರೆ. 2019ರ ವಿಧಾನಸಭಾ ಚುನಾವಣೆಯ ನಂತರ ಸೊರೊನೆ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಅಧಿಕಾರಕ್ಕೆ ಬಂದಿತು.

SCROLL FOR NEXT