ದೇಶ

ಬೃಹತ್ ಧಾರ್ಮಿಕ ಮೇಳ ನಿಷೇಧಕ್ಕೆ ಮಮತಾ ಬ್ಯಾನರ್ಜಿ ನಕಾರ

Srinivas Rao BV

ಕೋಲ್ಕತ್ತ: ಕೊರೋನಾ ಸಂಬಂಧಿತ ನಿರ್ಬಂಧಗಳನ್ನು ಎಲ್ಲೆಡೆಯೂ ಹೇರುವುದಕ್ಕೆ ಸಾಧ್ಯವಿಲ್ಲ ಅದರಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ಮುಂದಿನ ತಿಂಗಳಿನಿಂದ ಗಂಗಾ ಸಾಗರ್ ಮೇಳ ನಡೆಯಲಿರುವ ದಕ್ಷಿಣ 24 ಪರಗಣಾಸ್ ಜಿಲ್ಲೆಯ ಸಾಗರ್ ದ್ವೀಪದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, ಕೋಲ್ಕತ್ತಾ ಹಲವು ಮಂದಿಗೆ ರೈಲು, ವಿಮಾಗಳಲ್ಲಿ ಪ್ರಯಾಣದ ಮಾರ್ಗ ಬದಲಾವಣೆ ಮಾಡುವ ಪ್ರದೇಶವಾಗಿರುವುದರಿಂದ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. 

ಕೋವಿಡ್-19  ನ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿರುವುದು ಬ್ರಿಟನ್ ನಿಂದ ವಿಮಾನಗಳಿಂದ ಆಗಮಿಸುತ್ತಿರುವವರಲ್ಲಿ ಆಗಿದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಬರುವವರಿಂದ ಓಮಿಕ್ರಾನ್ ಹರಡುತ್ತಿದೆ ಎಂಬುದು ವಾಸ್ತವ. ಓಮಿಕ್ರಾನ್ ಹೆಚ್ಚಾಗಿರುವ ದೇಶಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಬೇಕೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ತಮ್ಮ ಸರ್ಕಾರ ತುರ್ತು ಸಾಂಕ್ರಾಮಿಕ ಸ್ಥಿತಿಯನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ, ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧಗಳ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

"ಜನರ ಸುರಕ್ಷತೆ, ಭದ್ರತೆಗಳೆಡೆಗೆ ನಾವು ಗಮನ ಹರಿಸಬೇಕು ಪ್ರಕರಣಗಳು ಹೆಚ್ಚಳವಾಗುತ್ತಿರುವ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ನಿರ್ಬಂಧಗಳನ್ನು ವಿಧಿಸುತ್ತೇವೆ. ಆರ್ಥಿಕತೆಯ ಮೇಲೆ ನಿರ್ಬಂಧಗಳು ಪರಿಣಾಮ ಬೀರುವುದರಿಂದ ಎಲ್ಲಾ ಕಡೆಗಳಲ್ಲೂ ನಿರ್ಬಂಧ ವಿಧಿಸುವುದಕ್ಕೆ ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

SCROLL FOR NEXT