ದೇಶ

ರಾಜಸ್ಥಾನ: ಓಮಿಕ್ರಾನ್‌ನಿಂದ ಚೇತರಿಸಿಕೊಂಡಿದ್ದ ವ್ಯಕ್ತಿ ಸಾವು

Lingaraj Badiger

ಜೈಪುರ: ಜೀನೋಮ್ ಸೀಕ್ವೆನ್ಸಿಂಗ್‌ನಲ್ಲಿ ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದ 73 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಉದಯಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಸೆಂಬರ್ 21 ಮತ್ತು 25 ರಂದು ಈ ವ್ಯಕ್ತಿಗೆ ಎರಡು ಬಾರಿ ಕೊರೋನಾ ನೆಗೆಟಿವ್ ಬಂದಿತ್ತು. ಆದರೆ ಅವರು ಕೋವಿಡ್ ನಂತರ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ ಎಂದು ಉದಯಪುರ CMHO ಡಾ ದಿನೇಶ್ ಖರಾಡಿ ಅವರು ಹೇಳಿದ್ದಾರೆ.

ಮೃತ ವ್ಯಕ್ತಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮತ್ತು ಹೈಪೋಥೈರಾಯ್ಡಿಸಮ್ ಅನ್ನು ಹೊಂದಿದ್ದರು. ಈ ಸ್ಥಿತಿಯಲ್ಲಿ ವೈರಸ್ ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಅಲ್ಲದೆ ಮಧುಮೇಹ ಹೊಂದಿರುವ ರೋಗಿ ಹೆಚ್ಚಿನ ಪ್ರಮಾಣದಲ್ಲಿ ಅಪಾಯ ಇರುತ್ತದೆ ಎಂದು ಡಾ.ದಿನೇಶ್ ಖಾರಾಡಿ ಅವರು ತಿಳಿಸಿದ್ದಾರೆ.

ಡಿಸೆಂಬರ್ 15 ರಂದು ಈ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಬಂದಿತ್ತು ಮತ್ತು ಜ್ವರ, ಕೆಮ್ಮು ಹಾಗೂ ಮೂಗು ಸೋರುವಿಕೆಯಂತಹ ರೋಗಲಕ್ಷಣಗಳನ್ನು ಹೊಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಡಾ ಖಾರಾಡಿ ಹೇಳಿದ್ದಾರೆ.

ರಾಜಸ್ಥಾನದಲ್ಲಿ ಇಲ್ಲಿಯವರೆಗೆ 69 ಒಮೈಕ್ರಾನ್ ರೋಗಿಗಳು ಪತ್ತೆಯಾಗಿದ್ದು, ಒಮೈಕ್ರಾನ್ ಸೋಂಕಿತರ ವಿಷಯದಲ್ಲಿ ರಾಜಸ್ಥಾನವು ದೇಶದಲ್ಲಿ ನಾಲ್ಕನೇ ಸ್ಥಾನ ಹೊಂದಿದೆ.

SCROLL FOR NEXT