ದೇಶ

ಛತ್ತೀಸಗಢ: ತಲೆಗೆ 3 ಲಕ್ಷ ರೂ. ಬಹುಮಾನ ಹೊತ್ತಿದ್ದ ನಕ್ಸಲ್ ಎನ್ ಕೌಂಟರ್ ನಲ್ಲಿ ಬಲಿ, ಶಸ್ತ್ರಾಸ್ತ್ರ ವಶ

Vishwanath S

ರಾಯ್‌ಪುರ: ನಕ್ಸಲ್ ಪೀಡಿತ ಬಸ್ತಾರ್ ಜಿಲ್ಲೆಯ ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ನಕ್ಸಲ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಯ್‌ಪುರದಿಂದ 300 ಕಿ.ಮೀ ದೂರದಲ್ಲಿರುವ ದರ್ಭಾ ಪೊಲೀಸ್ ಠಾಣೆ ವ್ಯಾಪ್ತಿಯ ಎಲಂಗಾನಾರ್ ಗ್ರಾಮದ ಸಮೀಪದ ಅರಣ್ಯದಲ್ಲಿ ಬುಧವಾರ ರಾತ್ರಿ ಗುಂಡಿನ ಚಕಮಕಿ ನಡೆದಿದೆ. ಜಿಲ್ಲಾ ಮೀಸಲು ಕಾವಲು ಪಡೆ(ಡಿಆರ್‌ಜಿ) ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲ್ ನನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ ತಿಳಿಸಿದರು.

ಜೂನ್ 18ರಂದು ಬಸ್ತಾರ್‌ನ ಚಂದಮೆಟಾ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ನಕ್ಸಲ್ ನಡುವಿನ ಗುಂಡಿನ ಕಾಳಗದಲ್ಲಿ ಮಹಿಳಾ ನಕ್ಸಲ್ ಸಾವನ್ನಪ್ಪಿದ್ದಳು. 

ಗುಂಡಿನ ಕಾಳಗದಲ್ಲಿ ಇತರ ಕೆಲವು ನಕ್ಸಲರಿಗೆ ಗಾಯಗಳಾಗಿವೆ. ಆದರೆ ಅವರು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಅಂದಿನಿಂದ ಭದ್ರತಾ ಪಡೆಗಳು ಅವರನ್ನು ಕಾಡಿನಲ್ಲಿ ಪತ್ತೆ ಹಚ್ಚಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದರು.

ಎನ್ ಕೌಂಟರ್ ನಲ್ಲಿ ಪುರುಷ ನಕ್ಸಲ್ ಶವ ಪತ್ತೆಯಾಗಿದ್ದು ಒಂದು ರೈಫಲ್ ಅನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಮೃತ ನಕ್ಸಲ್ ನನ್ನು ಪ್ಲಟೂನ್ ನಂ. 26ರ ವಿಭಾಗದ ಕಮಾಂಡರ್ ಮಾಡ್ವಿ ಜೋಗಾ ಎಂದು ಗುರುತಿಸಲಾಗಿದ್ದು ಇತನ ತಲೆಗೆ 3 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

SCROLL FOR NEXT