ದೇಶ

ಸಿಎಂ ಉದ್ಧವ್ ಠಾಕ್ರೆ ಜೊತೆ ಅಭಿವೃದ್ಧಿ ವಿಷಯಗಳ ಚರ್ಚೆಯಾಗಿದೆ ಹೊರತು ರಾಜಕೀಯವಲ್ಲ: ಶರದ್ ಪವಾರ್

Vishwanath S

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆಗಿನ ಸಭೆಯಲ್ಲಿ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೇಗೆ ತ್ವರಿತಗೊಳಿಸುವುದು ಎಂಬುದರ ಬಗ್ಗೆ ಚರ್ಚಿಸಲಾಗಿದೆ ಹೊರತು ರಾಜಕೀಯ ವಿಷಯವನಲ್ಲ. ಇದನ್ನು ಬೇರೆ ರೀತಿ ಅರ್ಥೈಸಿಕೊಳ್ಳಬಾರದು ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, 'ಇಲ್ಲಿ ಯಾವುದೇ ರಾಜಕೀಯ ವಿಷಯ ಚರ್ಚೆಯಾಗಿಲ್ಲ. ಅಭಿವೃದ್ಧಿ ಕುರಿತಂತೆ ಕೆಲವು ನಿರ್ಧಾರಗಳನ್ನು ವೇಗವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂಬುದು ನಮ್ಮ ಅಭಿಪ್ರಾಯ. ಮುಖ್ಯಮಂತ್ರಿಯವರೊಂದಿಗಿನ ನನ್ನ ಸಭೆ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೇಗೆ ತ್ವರಿತಗೊಳಿಸುವುದು ಎಂಬುದರ ಕುರಿತು ಚರ್ಚಿಸಲಾಗಿದೆ ಎಂದರು. 

ಶಿವಸೇನೆ ನೇತೃತ್ವದ ಎಂವಿಎ ಸರ್ಕಾರದಲ್ಲಿ ಪ್ರಮುಖ ಪಕ್ಷವಾಗಿರುವ ಎನ್‌ಸಿಪಿ ನಾಯಕ ಶರದ್ ಪವಾರ್, ಸಮ್ಮಿಶ್ರ ಸರ್ಕಾರ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ರಾಜಕೀಯ ವಲಯಗಳಲ್ಲಿ ಊಹಾಪೋಹಗಳು ಚರ್ಚೆಯಾಗುವ ಎರಡು ದಿನಗಳ ಹಿಂದೆ ಠಾಕ್ರೆ ಅವರನ್ನು ಭೇಟಿ ಮಾಡಿದ್ದರು. ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳ ಒಕ್ಕೂಟವಾದ ಎಂವಿಎದಲ್ಲಿ ಕಾಂಗ್ರೆಸ್ ಮೂರನೇ ಪಾಲುದಾರ ಪಕ್ಷವಾಗಿದೆ. 

ಎಂವಿಎಯಿಂದ ಹಿಂದೆ ಸರಿಯುವಂತೆ ಎನ್‌ಸಿಪಿ ಮೇಲೆ ಒತ್ತಡವಿದೆ. ಅಲ್ಲದೆ ಪವಾರ್ ಕುಟುಂಬಕ್ಕೆ ಸೇರಿದ ಹಲವಾರು ಸಂಸ್ಥೆಗಳಿಗೆ ಇಡಿ ನೋಟಿಸ್ ನೀಡುತ್ತಿದೆ ಎಂಬ ಊಹಾಪೋಹಗಳಿಗೆ 80 ವರ್ಷದ ಮಾಜಿ ಕೇಂದ್ರ ಕೃಷಿ ಸಚಿವರು ನಿರಾಕರಿಸಿದರು. 

SCROLL FOR NEXT