ಸಾಂದರ್ಭಿಕ ಚಿತ್ರ 
ದೇಶ

ಭಾರತೀಯ ಲಸಿಕೆ ಪಡೆದು ಬಂದವರಿಗೆ ಜರ್ಮನಿ ಗ್ರೀನ್ ಸಿಗ್ನಲ್, ಇತರ ಇಯು ರಾಷ್ಟ್ರಗಳು ಒಪ್ಪುವ ನಿರೀಕ್ಷೆ

ಐರೋಪ್ಯ ಒಕ್ಕೂಟದ ಡಿಜಿಟಲ್ ಕೋವಿಡ್ ಪ್ರಮಾಣಪತ್ರ ಅಥವಾ ಗ್ರೀನ್ ಪಾಸ್ ಇಂದು ಜುಲೈ 1ರಿಂದ ಜಾರಿಗೆ ಬರುತ್ತಿದೆ. ಈ ಮಧ್ಯೆ ಭಾರತದಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡವರಿಗೆ ವೈಯಕ್ತಿಕವಾಗಿ ವಿನಾಯ್ತಿ ನೀಡುವಂತೆ ಭಾರತ ಐರೋಪ್ಯ ಒಕ್ಕೂಟದ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಒತ್ತಾಯಿಸಿದೆ.

ನವದೆಹಲಿ:ಐರೋಪ್ಯ ಒಕ್ಕೂಟದ ಡಿಜಿಟಲ್ ಕೋವಿಡ್ ಪ್ರಮಾಣಪತ್ರ ಅಥವಾ ಗ್ರೀನ್ ಪಾಸ್ ಇಂದು ಜುಲೈ 1ರಿಂದ ಜಾರಿಗೆ ಬರುತ್ತಿದೆ. ಈ ಮಧ್ಯೆ ಭಾರತದಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡವರಿಗೆ ವೈಯಕ್ತಿಕವಾಗಿ ವಿನಾಯ್ತಿ ನೀಡುವಂತೆ ಭಾರತ ಐರೋಪ್ಯ ಒಕ್ಕೂಟದ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಒತ್ತಾಯಿಸಿದೆ.

ಜರ್ಮನಿ ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ. ಜರ್ಮನಿಯ ಭಾರತದ ರಾಯಭಾರಿ ವಾಲ್ಟರ್ ಜೆ ಲಿಂಡ್ನರ್ ಕೋವಿಶೀಲ್ಡ್ ಲಸಿಕೆಗೆ ನೀಡಿರುವ ಮಾನ್ಯತೆ ಬಗ್ಗೆ ದೃಢಪಡಿಸಿದ್ದಾರೆ. ಕೋವಿಶೀಲ್ಡ್ ನ ಎರಡು ಲಸಿಕೆಯನ್ನು ಜರ್ಮನಿ ಸಂಪೂರ್ಣವಾಗಿ ಮಾನ್ಯ ಮಾಡಿ ದೃಢಪಡಿಸಿದ್ದು ಅದನ್ನು ಕೋವಿಡ್ ತಡೆಗಟ್ಟುವಿಕೆ ಲಸಿಕೆಯ ಮಾನ್ಯ ಗುರುತಿನ ಪತ್ರವಾಗಿ ಬಳಸಿಕೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಗ್ರೀನ್ ಪಾಸ್ ಮಾನ್ಯತೆಗಾಗಿ ಭಾರತವು ನೀತಿಯನ್ನು ಪಾಲಿಸಿದೆ ಎಂದು ಕೂಡ ಜರ್ಮನಿ ಇತರ ಐರೋಪ್ಯ ರಾಷ್ಟ್ರಗಳಿಗೆ ಮನವರಿಕೆ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಐರೋಪ್ಯ ಒಕ್ಕೂಟದ ಡಿಜಿಟಲ್ ಕೋವಿಡ್ ಪ್ರಮಾಣಪತ್ರದಲ್ಲಿ ಸೇರ್ಪಡೆಗೊಳ್ಳಲು ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಅಧಿಸೂಚನೆ ಮತ್ತು ಭಾರತೀಯ ಕೋವಿನ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಗುರುತಿಸಿದ ನಂತರ, ಭಾರತದ ಆರೋಗ್ಯ ಅಧಿಕಾರಿಗಳು ಸಂಬಂಧಪಟ್ಟ ಇಯು ಸದಸ್ಯ ರಾಷ್ಟ್ರವನ್ನು ಇಯು ಡಿಜಿಟಲ್ ಕೋವಿಡ್ ಪ್ರಮಾಣಪತ್ರವನ್ನು ಹೊಂದಿರುವ ಕಡ್ಡಾಯ ನಿರ್ಬಂಧದಿಂದ ವಿನಾಯಿತಿ ನೀಡುತ್ತಾರೆ.

ಭಾರತದಲ್ಲಿ ಕೋವಿಡ್ -19 ಲಸಿಕೆಯ ಎರಡೂ ಡೋಸ್ ಗಳನ್ನು ತೆಗೆದುಕೊಂಡ ವ್ಯಕ್ತಿಗಳಿಗೆ ಇದೇ ರೀತಿಯ ವಿನಾಯಿತಿ ನೀಡುವುದನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ನಾವು ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ವಿನಂತಿಸಿದ್ದೇವೆ ಮತ್ತು ಕೋವಿನ್ ಪೋರ್ಟಲ್ ಮೂಲಕ ನೀಡಲಾದ ಲಸಿಕೆ ಪ್ರಮಾಣಪತ್ರವನ್ನು ಸ್ವೀಕರಿಸುತ್ತೇವೆ. ಅಂತಹ ಲಸಿಕೆ ಪ್ರಮಾಣೀಕರಣವನ್ನು ಕೋವಿನ್ ಪೋರ್ಟಲ್ ನಲ್ಲಿ ದೃಢಪಡಿಸಬಹುದು ಎಂದು ಮೂಲಗಳು ತಿಳಿಸಿವೆ.

ಐರೋಪ್ಯ ಒಕ್ಕೂಟದ ನಿಯಂತ್ರಕ ಸಂಸ್ಥೆಯಾದ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಫಿಜರ್, ಜಾನ್ಸನ್ ಮತ್ತು ಜಾನ್ಸನ್, ಮಾಡರ್ನಾ ಮತ್ತು ಅಸ್ಟ್ರಾಜೆನೆಕಾದ ಯುರೋಪ್ ಸ್ಥಾವರದಲ್ಲಿ ತಯಾರಿಸಿದ ನಾಲ್ಕು ಲಸಿಕೆ ಉತ್ಪನ್ನಗಳನ್ನು ಅನುಮೋದಿಸಿತ್ತು.ಲಸಿಕೆಯ ಎರಡೂ ಡೋಸ್ ಗಳನ್ನು ಪ್ರವಾಸಿಗರಿಗೆ ಮತ್ತು ವ್ಯಾಪಾರ ಉದ್ದೇಶಗಳಿಗಾಗಿ ಜನರಿಗೆ ನೀಡಲಾಗುತ್ತದೆ. ಅಸ್ಟ್ರಾಜೆನೆಕಾದ ಲಸಿಕೆಯನ್ನು ಪರವಾನಗಿ ಅಡಿಯಲ್ಲಿ ತಯಾರಿಸುತ್ತಿದ್ದರೂ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಪಟ್ಟಿಯಲ್ಲಿ ಇರಲಿಲ್ಲ.

ಆದಾಗ್ಯೂ, ಐರೋಪ್ಯ ಒಕ್ಕೂಟ ತನ್ನ ಸದಸ್ಯ ರಾಷ್ಟ್ರಗಳಿಗೆ ನಿಯಮವನ್ನು ತಿದ್ದುಪಡಿ ಮಾಡಲು ಮತ್ತು ನಾಲ್ಕರಲ್ಲಿ ಯಾವ ಲಸಿಕೆಗಳನ್ನು ತೆಗೆದುಕೊಳ್ಳದ ವ್ಯಕ್ತಿಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಐರೋಪ್ಯ ಒಕ್ಕೂಟದ ಉನ್ನತ ಪ್ರತಿನಿಧಿ ಜೋಸೆಫ್ ಬೊರ್ರೆಲ್ಲ್ ಫಾಂಟೆಲ್ಸ್ ಅವರೊಂದಿಗೆ ಇಟೆಲಿಯಲ್ಲಿ ನಡೆದಿದ್ದ ಜಿ20 ವಿದೇಶಾಂಗ ಸಚಿವರುಗಳ ಮಾತುಕತೆಯ ಹೊರಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾತುಕತೆ ನಡೆಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT