'ಝೈಕೋವ್-ಡಿ' ಕೋವಿಡ್ ಲಸಿಕೆ 
ದೇಶ

ಭಾರತದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್-19 ಲಸಿಕೆ 'ಝೈಕೋವ್-ಡಿ' ಮುಂದಿನ ತಿಂಗಳು ಮಾರುಕಟ್ಟೆಗೆ!

ದೇಶಕ್ಕೆ 5ನೇ ಲಸಿಕೆಯಾಗಿ ಮತ್ತು ಭಾರತದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್ -19 ಲಸಿಕೆಯಾಗಿರುವ ಝೈಡಸ್ ಕ್ಯಾಡಿಲಾ ಸಂಸ್ಥೆಯ 'ಝೈಕೋವ್-ಡಿ' ಮುಂದಿನ ತಿಂಗಳೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ನವದೆಹಲಿ: ದೇಶಕ್ಕೆ 5ನೇ ಲಸಿಕೆಯಾಗಿ ಮತ್ತು ಭಾರತದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್ -19 ಲಸಿಕೆಯಾಗಿರುವ ಝೈಡಸ್ ಕ್ಯಾಡಿಲಾ ಸಂಸ್ಥೆಯ 'ಝೈಕೋವ್-ಡಿ' ಮುಂದಿನ ತಿಂಗಳೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಹೌದು.. ಈ ಬಗ್ಗೆ ಸ್ವತಃ ಕ್ಯಾಡಿಲಾ ಹೆಲ್ತ್ ಕೇರ್ ಎಂಡಿ ಶರ್ವಿಲ್ ಪಟೇಲ್ ಅವರು ಮಾಹಿತಿ ನೀಡಿದ್ದು, ಭಾರತದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್ -19 ಲಸಿಕೆ 'ಝೈಕೋವ್-ಡಿ' ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, 'ಆಗಸ್ಟ್ ತಿಂಗಳಿನಿಂದ ಸಂಸ್ಥೆಯ ತನ್ನ ಲಸಿಕಾ ಉತ್ಪಾದನೆಯನ್ನು ಹೆಚ್ಚಳ ಮಾಡಲಿದ್ದು, ಮುಂದಿನ ತಿಂಗಳಿನಿಂದಲೇ 1 ಕೋಟಿ ಡೋಸ್ ಲಸಿಕೆ ಉತ್ಪಾದನೆಯಾಗಲಿದೆ. ಡಿಸೆಂಬರ್ ವೇಳೆಗೆ 5 ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುವ ಗುರಿ  ಹೊಂಜಲಾಗಿದೆ. ಈ ವರ್ಷದಲ್ಲಿ 10 ಕೋಟಿ ಡೋಸ್ ಲಸಿಕೆ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ಶರ್ವಿಲ್ ಪಟೇಲ್ ಹೇಳಿದರು.

ದೇಶದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್ -19 ಲಸಿಕೆ
ಇನ್ನು ಕ್ಯಾಡಿಲಾ ಸಂಸ್ಥೆಯ 'ಝೈಕೋವ್-ಡಿ' ದೇಶದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್ -19 ಲಸಿಕೆಯಾಗಿದ್ದು, ಲಸಿಕೆಯ ತುರ್ತುಬಳಕೆಗಾಗಿ ಡಿಸಿಜಿಐನ ಅನುಮತಿ ಕೋರಿದ್ದೇವೆ. ಈ ಸಂಬಂಧ ಅಗತ್ಯ ಎಲ್ಲ ದಾಖಲೆಗಳನ್ನೂ ಸಲ್ಲಿಕೆ ಮಾಡಲಾಗಿದ್ದು, ಶೀಘ್ರದಲ್ಲೇ ಅನುಮತಿ ದೊರೆಯುವ ವಿಶ್ವಾಸವಿದೆ ಎಂದು  ಪಟೇಲ್ ಹೇಳಿದರು.

ಈಗಾಗಲೇ ಝೈಡಸ್ ಕ್ಯಾಡಿಲಾ ಸಂಸ್ಥೆಯ ಆ್ಯಂಟಿ ಕೋವಿಡ್ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈ ಔಷಧಿಗಳನ್ನು ಭಾರತದಲ್ಲಿ ವಿವಿಧ ಹಂತಗಳಲ್ಲಿ ಕ್ಲಿನಿಕಲ್ ಪ್ರಯೋಗಕ್ಕೆ ಬಳಸಲಾಗಿತ್ತು. ದೇಶದ ವಿವಿಧ ಪ್ರದೇಶಗಳ 50 ಕೇಂದ್ರಗಳಲ್ಲಿ ಈ ಪ್ರಯೋಗ ನಡೆಸಲಾಗಿತ್ತು. ಈ ಪ್ರಯೋಗದಲ್ಲಿ 12 ರಿಂದ 18  ವರ್ಷದೊಳಗಿನ ಮಕ್ಕಳೂ ಸೇರಿದ್ದರು ಎಂದು ಸಂಸ್ಥೆ ಹೇಳಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ ಸಿಎಂ ಆಯ್ಕೆ: ಕೆಸಿ ವೇಣುಗೋಪಾಲ್ ರಾಹುಲ್ ಗಾಂಧಿಯ ಆದ್ಯತೆ; ಕುತೂಹಲ ಮೂಡಿಸಿದ ಖಾಸಗಿ ಭೇಟಿ!

ಸಿಎಂ ಪದಗ್ರಹಣ ಕಾರ್ಯಕ್ರಮ: ತಮಿಳು ಪರಂಪರೆ, ಸಂಪ್ರದಾಯ ಮುರಿದ ವಿಜಯ್

ತಮಿಳುನಾಡು ಸಿಎಂ ಆಗಿ ನಟ ವಿಜಯ್ ಪ್ರಮಾಣ ವಚನ ಸ್ವೀಕಾರ; 74 ವರ್ಷಗಳ ದಾಖಲೆ ಪತನ!

IFS ಪರೀಕ್ಷೆಯಲ್ಲಿ ರೈತನ ಪುತ್ರ ದೇಶಕ್ಕೆ ಪ್ರಥಮ Rank: ಬೆಳಗಾವಿಗೆ ಸಂತಸದ ಕ್ಷಣ!

ತಿರುಚಿರಾಪಳ್ಳಿ ವಿಧಾನಸಭೆ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ TVK ಮುಖ್ಯಸ್ಥ ವಿಜಯ್!

SCROLL FOR NEXT