ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ (ಸಂಗ್ರಹ ಚಿತ್ರ) 
ದೇಶ

ಕೋವಿಡ್-19 ಭವಿಷ್ಯದಲ್ಲಿ ಎಂಡಮಿಕ್ ಆಗಲಿದೆ: ತಜ್ಞರು

ಕೋವಿಡ್-19 ಪ್ರಕರಣಗಳು ಕ್ರಮೇಣವಾಗಿ ಕುಗ್ಗುತ್ತಿರಬಹುದು ಆದರೆ ಅದರ ವೈರಾಣು ರೂಪಾಂತರಗೊಳ್ಳುತ್ತಿದೆ. ದೆಹಲಿಯಲ್ಲಿ ಶೂನ್ಯ ಪ್ರಕರಣಗಳು ದಾಖಲಾಗುವುದು ಕಷ್ಟ ಸಾಧ್ಯ ಎಂದು ತಜ್ಞರು ಹೇಳಿದ್ದಾರೆ. 

ನವದೆಹಲಿ: ಕೋವಿಡ್-19 ಪ್ರಕರಣಗಳು ಕ್ರಮೇಣವಾಗಿ ಕುಗ್ಗುತ್ತಿರಬಹುದು ಆದರೆ ಅದರ ವೈರಾಣು ರೂಪಾಂತರಗೊಳ್ಳುತ್ತಿದೆ. ದೆಹಲಿಯಲ್ಲಿ ಶೂನ್ಯ ಪ್ರಕರಣಗಳು ದಾಖಲಾಗುವುದು ಕಷ್ಟ ಸಾಧ್ಯ ಎಂದು ತಜ್ಞರು ಹೇಳಿದ್ದಾರೆ. 

ಕೊರೋನಾ ಭವಿಷ್ಯದಲ್ಲಿ ಸ್ಥಳೀಯ ಪ್ರಭೇಧಗಳ ಎಂಡಮಿಕ್ ಆಗಲಿದ್ದು, ಕೊರೋನಾದ ಕೆಲವೇ ಕೆಲವು ಪ್ರಕರಣಗಳಾದರೂ ಇರಲಿವೆ ಎಂದು ದೆಹಲಿ ಸರ್ಕಾರಿ ಸ್ವಾಮ್ಯದ ಎಲ್ಎನ್ ಜೆಪಿ ಆಸ್ಪತ್ರೆಯ ನಿರ್ದೇಶಕ ಡಾ. ಸುರೇಶ್ ಕುಮಾರ್ ಹೇಳಿದ್ದಾರೆ. 

"ದೆಹಲಿಯಲ್ಲಿ ಶೂನ್ಯ ಪ್ರಕರಣಗಳು ದಾಖಲಾಗುವುದು ಸಾಧ್ಯವಿಲ್ಲ. ವೈರಾಣು ರೂಪಾಂತರಗೊಳ್ಳುತ್ತಿದೆ. ಅದರ ಭವಿಷ್ಯದ ರೂಪಾಂತರವನ್ನು ಅಂದಾಜಿಸುವುದು ಕಷ್ಟ" ಎಂದು ಡಾ. ಸುರೇಶ್ ಕುಮಾರ್ ಹೇಳಿದ್ದಾರೆ. 

ಕೊರೋನಾ ವೈರಾಣು ಏಕೆ ರೂಪಾಂತರಗೊಳ್ಳುತ್ತಿದೆ ಎಂಬುದಕ್ಕೆ ಕಾರಣ ನೀಡಿರುವ ಅಮೃತ ಆಸ್ಪತ್ರೆಯ ಸ್ಥಳೀಯ ನಿರ್ದೇಶಕರಾದ ಡಾ. ಸಂಜೀವ್ ಕೆ. ಸಿಂಗ್ ಕೊರೋನಾ ಎಂಆರ್ ಎನ್ಎ ವೈರಾಣುವಾಗಿದ್ದು, ತನ್ನ ರಚನೆಯನ್ನು ನಿರಂತರವಾಗಿ ಬದಲಾವಣೆ ಮಾಡಿಕೊಳ್ಳುತ್ತಿರುತ್ತದೆ. 

ಈ ವೈರಾಣು ಜೀವಂತವಾಗಿ ಉಳಿಯುವುದಕ್ಕೆ ರೂಪಾಂತರಗೊಳ್ಳುತ್ತಿರುತ್ತದೆ. ಕೋವಿಡ್-19 ಇರಲಿದೆ, ಅದು ಎಲ್ಲಾ 193 ದೇಶಗಳನ್ನೂ ಬಾಧಿಸದೇ ಇರಬಹುದು ಆದರೆ ಅದರ ಅಸ್ತಿತ್ವ ಇರಲಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!