ದೇಶ

ಬಿಜೆಪಿ ಗುಲಾಮನಂತೆ ವರ್ತಿಸಬೇಡಿ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಟಿಎಂಸಿ ಸಂಸದ ಡೆರೆಕ್ ಒ'ಬ್ರಿಯೆನ್

Vishwanath S

ಕೊಲ್ಕತ್ತಾ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಭೇಟಿ ಕುರಿತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿರುದ್ಧ ಟಿಎಂಸಿ ರಾಜ್ಯಸಭಾ ಮುಖಂಡ ಡೆರೆಕ್ ಒ'ಬ್ರಿಯೆನ್ ವಾಗ್ದಾಳಿ ಮುಂದುವರೆಸಿದ್ದಾರೆ.

ಟ್ವೀಟ್‌ ಮಾಡಿರುವ ಓಬ್ರಿಯೆನ್, ಮೆಹ್ತಾ ಯಾವುದೇ ಪ್ರಕರಣದಲ್ಲಿ ಆರೋಪಿಯನ್ನು ಪ್ರತಿನಿಧಿಸಬಾರದು ಅಥವಾ ಸಲಹೆ ನೀಡಬಾರದು. ಒಂದು ಕಾಲದಲ್ಲಿ ಟಿಎಂಸಿ ಬಲಗೈನಂತಿದ್ದ ಅಧಿಕಾರಿ, ನಾರದಾ ಟೇಪ್ಸ್ ಪ್ರಕರಣ ಮತ್ತು ಶಾರದಾ ಚಿಟ್ ಫಂಡ್ ಹಗರಣ ಆರೋಪಿ. ಹೀಗಾಗಿ ಅನುಚಿತತೆ. ನ್ಯಾಯಯುತವಾಗಿ ವರ್ತಿಸಿ. ಬಿಜೆಪಿ ಗುಲಾಮನಂತಲ್ಲ ಎಂದು ಒ'ಬ್ರೇನ್ ಹೇಳಿದರು.

ಮೆಹ್ತಾ ತಾವು ಸುವೇಂದುರನ್ನು ಭೇಟಿಯಾಗುವುದನ್ನು ನಿರಾಕರಿಸಿದರು. ಆದರೆ ಬಿಜೆಪಿ ಮುಖಂಡರು ಅಘೋಷಿತವಾಗಿ ತಮ್ಮ ನಿವಾಸಕ್ಕೆ ಭೇಟಿ ನೀಡಿರುವುದಾಗಿ ಹೇಳಿದ್ದರು ಎಂದರು. 

ಅಟಾರ್ನಿ ಜನರಲ್ ನಂತರ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಎರಡನೇ ಪ್ರಭಾವಿ ಕಾನೂನು ಅಧಿಕಾರಿಯಾಗಿದ್ದು, ಭಾರತ ಸರ್ಕಾರ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಕಾನೂನು ಸಲಹೆ ನೀಡುತ್ತಾರೆ. ಈ ಪೈಕಿ ನಾರದಾ ಹಾಗೂ ಶಾರದಾ ಪ್ರಕರಣಗಳೂ ಇದ್ದು, ಪ್ರಕರಣದ ತನಿಖೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವುದಕ್ಕಾಗಿ ಎಸ್ ಜಿಯನ್ನು ಸುವೇಂದು ಅಧಿಕಾರಿ ಭೇಟಿ ಮಾಡಿದ್ದಾರೆ. ಆದ್ದರಿಂದ ಎಸ್ ಜಿ ಅವರನ್ನು ವಜಾಗೊಳಿಸಬೇಕೆಂದು ಟಿಎಂಸಿ ಆಗ್ರಹಿಸಿದ್ದಾರೆ. 

SCROLL FOR NEXT